Wednesday, March 18, 2026
Google search engine

Homeಸ್ಥಳೀಯಗೃಹಬಳಕೆ ಸಿಲಿಂಡರ್‌ಗೂ ತಟ್ಟಿದ ಕೊರತೆ ಭೀತಿ : ವಿತರಣೆಗೆ ಪೊಲೀಸ್ ಕಾವಲು

ಗೃಹಬಳಕೆ ಸಿಲಿಂಡರ್‌ಗೂ ತಟ್ಟಿದ ಕೊರತೆ ಭೀತಿ : ವಿತರಣೆಗೆ ಪೊಲೀಸ್ ಕಾವಲು

ಬೆಂಗಳೂರು : ಸಿಲಿಂಡರ್‌ಗಳ ಬಿಕ್ಕಟ್ಟು ಬೆಂಗಳೂರಿನಲ್ಲಿ ತೀವ್ರಗೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆತಂಕ ಇದೀಗ ಗೃಹಬಳಕೆಯ ಸಿಲಿಂಡರ್‌ಗಳ ಬಳಕೆದಾರರಿಗೂ ಹಬ್ಬಿದೆ. ಸಿಲಿಂಡರ್‌ಗಳು ಸಿಗುವುದಿಲ್ಲ ಎಂಬ ಭಯದಲ್ಲಿ ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಗೃಹಬಳಕೆ ಗ್ರಾಹಕರು, ಏಜೆನ್ಸಿಗಳ ಬಳಿ ಮುಗಿಬೀಳುತ್ತಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ದೊಡ್ಡ ಸಂಖ್ಯೆಯ ಗ್ರಾಹಕರು ಸಿಲಿಂಡರ್‌ಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ.

ಸಾಮಾನ್ಯವಾಗಿ ಏಜೆನ್ಸಿಗಳು ಮನೆಗಳಿಗೆ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೆ ವಿತರಣೆ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ತಾವೇ ಖಾಲಿ ಸಿಲಿಂಡರ್‌ಗಳನ್ನು ತಂದು ಭರ್ತಿ ಮಾಡಿದ ಸಿಲಿಂಡರ್‌ಗಳನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ನೂಕು ನುಗ್ಗಲು ಉಂಟಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್​​ ಸಿಬ್ಬಂದಿಯೂ ಹಾಜರಿದ್ದಿದ್ದು ಗಮನ ಸೆಳೆದಿದೆ.

RELATED ARTICLES
- Advertisment -
Google search engine

Most Popular