Friday, April 4, 2025
Google search engine

HomeUncategorizedರಾಷ್ಟ್ರೀಯಫೆ. 5 ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹಾ ಕುಂಭ ಮೇಳಕ್ಕೆ ಭೇಟಿ

ಫೆ. 5 ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹಾ ಕುಂಭ ಮೇಳಕ್ಕೆ ಭೇಟಿ

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5ರಂದು ಭೇಟಿ ನೀಡಲಿದ್ದಾರೆ.

ಮಾಘ ಮಾಸದ ಅಷ್ಟಮಿಯಂದು ಅವರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಸ್ನಾನದ ನಂತರ ಸಂಗಮದಲ್ಲಿ ಗಂಗೆಯನ್ನು ಪೂಜಿಸಲಿದ್ದಾರೆ. ಪ್ರಧಾನಿ ನಾಳೆ ಬೆಳಗ್ಗೆ 10 ಗಂಟೆಗೆ ಮಹಾಕುಂಭವನ್ನು ತಲುಪಲಿದ್ದಾರೆ. ಅವರು ಅರೈಲ್ ಘಾಟ್ ನಿಂದ ದೋಣಿ ಮೂಲಕ ಸಂಗಮ್ ಗೆ ಹೋಗಲಿದ್ದಾರೆ. ಈ ಸಮಯದಲ್ಲಿ, ಸ್ನಾನ ಮಾಡಿ ಗಂಗೆಯನ್ನು ಪೂಜಿಸಿ ನಂತರ ಹಿಂತಿರುಗುತ್ತಾರೆ. ಮಹಾ ಕುಂಭಮೇಳಕ್ಕೂ ಮುನ್ನ, 2024 ರ ಡಿಸೆಂಬರ್ 13 ರಂದು ಮೋದಿ ಸಂಗಮದ ದಡದಲ್ಲಿ ಗಂಗಾ ನದಿಗೆ ಆರತಿ ಮತ್ತು ಪೂಜೆ ಸಲ್ಲಿಸಿದ್ದರು.

RELATED ARTICLES
- Advertisment -
Google search engine

Most Popular