ಮಂಡ್ಯ: ಲಿಡ್‌ಕರ್ ಉತ್ಪನ್ನಗಳಾದ ಚರ್ಮದ ಚಪ್ಪಲಿ, ಶೂ, ಬೆಲ್ಟ್, ಸೋಫಾ, ಬ್ಯಾಗ್ ಸೇರಿದಂತೆ ವಿವಿಧ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಂಡ್ಯ ನಗರದ ಗುರುಭವನದಲ್ಲಿ ಫೆ.೪ ರಿಂದ ೧೧ ರವರೆಗೆ ಮಾರಾಟ ಏರ್ಪಡಿಸಿದೆ.
ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿದ ವತಿಯಿಂದ ಆಯೋಜಿಸಿರುವ ಮಾರಾಟವನ್ನು ನಗರದ ಜನತೆ ಸದುಪಯೋಗಪಡಿಸಿಕೊಳ್ಳಬೇಕು.
ಅಪ್ಪಟ ಚರ್ಮ ವಸ್ತುಗಳಿಂದ, ಚರ್ಮ ಕುಶಲಕರ್ಮಿಗಳಿಂದ ತಯಾರಿಸಲ್ಫಟ್ಟ ಪಾದರಕ್ಷೆ, ಶೂ, ಬೆಲ್ಟ್, ವ್ಯಾಲೆಟ್, ವ್ಯಾನಿಟಿ ಬ್ಯಾಗ್ ಮುಂತಾದ ಚರ್ಮ ವಸ್ತುಗಳನ್ನು ರಿಯಾಯಿತಿಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೯೪೮೦೮೮೬೨೫೮ ಅನ್ನು ಸಂಪರ್ಕಿಸಬಹುದು ಎಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.