ಬೆಂಗಳೂರು: ನಾಳೆ ಯುಗಾದಿ ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷ. ಹೀಗಾಗಿ ಯುಗಾದಿ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗಳಿಯಿಂದ ಕೂಡಿರುತ್ತದೆ. ಖರೀದಿ ಭರಾಟೆ ಜೋರಾಗಿರುತ್ತದೆ. ಆದರೆ ಈ ವರ್ಷ ಮಾರಕಟ್ಟೆಯಲ್ಲಿ ಹೇಳಿಕೊಳ್ಳುವಷ್ಟು ಜನರಿಲ್ಲ, ಇದರಿಂದ ಹೂವು, ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೆ ಏರಿದೆ.
ಎರಡು ವಾರಗಳ ಮಾರುಕಟ್ಟೆಯಲ್ಲಿ ಕೆಜಿ ಬೀನ್ಸ್ ಗೆ ೫೦ ರಿಂದ ೬೦ ರೂ. ಇತ್ತು. ಇದೀಗ ಬೀನ್ಸ್ ಬೆಲೆ ೭೦ ರೂ.ಗೆ ಏರಿಕೆಯಾಗಿದೆ. ೪೦ ರಿಂದ ೫೦ ರೂ. ವರೆಗೆ ಮಾರಾಟವಾಗುತ್ತಿದ್ದ ಕ್ಯಾರೆಟ್ ೬೦ ರೂ. ಕ್ಕೆ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಾದ ಕ್ಯಾಪ್ಸಿಕಂ, ಬದನೆ,ಟೊಮೇಟೊ ಬೆಲೆ ಕೆಜಿಗೆ ೧೦ ರೂ. ಏರಿಕೆಯಾಗಿದೆ.
