ಮಂಡ್ಯ: ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲೆಮನೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡರು ಮಂಡ್ಯದ ಹಾಡ್ಯ-ಹುಳ್ಳೇನಹಳ್ಳಿ ಸಮೀಪವಿರುವ ಆಲಮನೆಯನ್ನು ಪರಿಶೀಲಿಸಿ, ಸ್ಥಳೀಯರಿಂದ ಪ್ರಕರಣ ಸಂಬಂಧ ಮಾಹಿತಿ ಸಂಗ್ರಹಹಿಸಿದ್ದಾರೆ.
ಆಲೆಮನೆ ಸಣ್ಣ ಕೊಠಡಿಯಲ್ಲಿ 2 ವರ್ಷದಿಂದ ಭ್ರೂಣ ಲಿಂಗ ಪತ್ತೆ ನಡೆಯುತ್ತಿದ್ದರು ಮಾಹಿತಿ ಇಲ್ಲದ ಬಗ್ಗೆ ಆಯೋಗದ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಆಯೋಗದ ಅಧ್ಯಕ್ಷರಿಗೆ ಆಯೋಗದ ಸದಸ್ಯರಾದ ವೆಂಕಟೇಶ್ ಸಾಥ್ ನೀಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಾಗಬೇಕು
ಈ ವೇಳೆ ಮಾತನಾಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಇವತ್ತು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇವೆ. ಇವತ್ತಿನ ಕಾಲದಲ್ಲೂ ಹೆಣ್ಣು ಗಂಡು ಎಂಬ ತಾರತಮ್ಯ ಭ್ರೂಣ ಪತ್ತೆ ಮಾಡುವ ಕಾರ್ಯದಲ್ಲಿದ್ದೇವೆ ಎಂದರೆ. ನಾವು ನಾಚಿಕೆ ಪಡುವಂತ ಸಂಗತಿ. ದುಡ್ಡಿಗಾಗಿ ಈ ರೀತಿ ಕೃತ್ಯ ಮಾಡಬಾರದು. ಭ್ರೂಣ ಹತ್ಯೆ ಪತ್ತೆ ಮಾಡುವುದು ತುಂಬಾ ಕ್ರೂರವಾದುದು. ನಾವು ಎಲ್ಲರು ವಿದ್ಯಾವಂತರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಪೊಲೀಸರು ಅಲರ್ಟ್ ಆಗಿ ಇಂತಹ ಕೃತ್ಯ ತಡೆಯಬೇಕು. ಪಿಹೆಚ್ ಸಿ ಅವರು ಕೂಡ ಗಮನ ಹರಿಸಬೇಕು. ಇದು ನಿಗೂಢ ಜಾಗ ಇಲ್ಲಿ ಭ್ರೂಣ ಪತ್ತೆ ಹಚ್ಚುವ ಕೆಲಸ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇದೆ. ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಸಂಪೂರ್ಣ ತನಿಖೆಯಾಗಬೇಕು. ಇದರ ಹಿಂದೆ ದೊಡ್ಡ ಜಾಲ ಇದೆ ಪತ್ತೆ ಹಚ್ಚಬೇಕು. ಹೆಣ್ಣು ಮಕ್ಕಳ ಹತ್ಯೆ ಮಾಡುವುದು ಘೋರಾ ಅಪರಾಧ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ವಾಗಬೇಕು ಎಂದು ಒತ್ತಾಯಿಸಿದರು.