Saturday, April 19, 2025
Google search engine

Homeರಾಜಕೀಯಭ್ರೂಣಹತ್ಯೆ‌ ಪ್ರಕರಣ: ಆಡಳಿತ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದ ಮಾಜಿ ಸಿಎಂ ಹೆಚ್ ಡಿ....

ಭ್ರೂಣಹತ್ಯೆ‌ ಪ್ರಕರಣ: ಆಡಳಿತ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದ ಮಾಜಿ ಸಿಎಂ ಹೆಚ್ ಡಿ. ಕುಮಾರಸ್ವಾಮಿ

ಮೈಸೂರು: ಭ್ರೂಣಹತ್ಯೆ‌ ಪ್ರಕರಣ ಎಲ್ಲರೂ ತಲೆ ತಗ್ಗಿಸುವ ಪ್ರಕರಣವಾಗಿದೆ ಅಲ್ಲದೆ ಇದರಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯವನ್ನೇ ತಲ್ಲಣಗೊಳಿಸಿದ ಭ್ರೂಣಹತ್ಯೆ‌ ಪ್ರಕರಣದ ಕುರಿತು ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಇದು ಎಲ್ಲರೂ ತಲೆ ತಗ್ಗಿಸುವ ವಿಚಾರವಾಗಿದೆ ಅಲ್ಲದೆ ಇದು ಅತ್ಯಂತ ಅಮಾನವೀಯ ಘಟನೆ. ಇದರಲ್ಲಿ ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ನಾನು ಪೋಷಕರಿಗೂ ಮನವಿ ಮಾಡುತ್ತೇನೆ. ಮುಂದೆ ಈ ರೀತಿಯಾಗಬಾರದೆಂದು ಮನವಿ ಮಾಡುತ್ತೇನೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಕೂಡ ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವನೆ ಸರಿಯಲ್ಲ. ಭ್ರೂಣಹತ್ಯೆ ಕಾನೂನು ಬಾಹಿರ, ಪಾಪಕೃತ್ಯ. ಈ ಪ್ರಕಣದರಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಮಕ್ಕಳ ಕಳ್ಳತನ ಪ್ರಕರಣ ಪ್ರಕಣಗಳು ಹೆಚ್ಚುತ್ತಿವೆ, ಬೆಂಗಳೂರಿನಲ್ಲಿ ಮಕ್ಕಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸರ್ಕಾರವೂ ಜವಾಬ್ದಾರಿ ಹೊರಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೇಳಿದರು.

RELATED ARTICLES
- Advertisment -
Google search engine

Most Popular