Saturday, April 19, 2025
Google search engine

Homeಅಪರಾಧದಾಬಸ್‌ಪೇಟೆಯಲ್ಲಿ ಓವರ್‌ಟೇಕ್ ವಿಚಾರಕ್ಕೆ ಜಗಳ: ಕೆಎಸ್‌ಆರ್‌ಟಿಸಿ ಚಾಲಕನಿಗೆ ಚಾಕು ಇರಿತ

ದಾಬಸ್‌ಪೇಟೆಯಲ್ಲಿ ಓವರ್‌ಟೇಕ್ ವಿಚಾರಕ್ಕೆ ಜಗಳ: ಕೆಎಸ್‌ಆರ್‌ಟಿಸಿ ಚಾಲಕನಿಗೆ ಚಾಕು ಇರಿತ

ದಾಬಸ್‌ಪೇಟೆ: ವಾಹನ ಓವರ್ ಟೆಕ್ ಮಾಡುವ ವಿಚಾರದಲ್ಲಿ ಟಾಟಾ ಏಸ್ ವಾಹನ ಚಾಲಕ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಡುವೆ ಜಗಳವಾಗಿ ಬಸ್ ಚಾಲಕನಿಗೆ ವಾಹನ ಚಾಲಕ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶಿವಪ್ಪ ಮಡಿವಾಳ(೪೦) ಹಲ್ಲೆಗೊಳಗಾದ ಚಾಲಕ. ಭಾಸ್ಕರ್‌ರೆಡ್ಡಿ (೩೨) ಹಲ್ಲೆ ಮಾಡಿದ ವಾಹನ ಚಾಲಕ. ಕೊಪ್ಪಳದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ಹಾಲು ಸಾಗಿಸುವ ಟಾಟಾ ಏಸ್ ಚಾಲಕನ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ದಾಬಸ್‌ಪೇಟೆ ಸಮೀಪದ ಮೇಲೆ ಜಗಳವಾಗಿದೆ. ನಂತರ ಟಾಟಾ ಏಸ್ ಚಾಲಕ ದಾಬಸ್‌ಪೇಟೆ ಬಳಿಯ ಪ್ಲೈ ಓವರ್ ರಸ್ತೆ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಅಡ್ಡಹಾಕಿದ್ದು, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.

ಬಸ್ ಚಾಲಕನಿಗೆ ದಾಬಸ್‌ಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭಾಸ್ಕರರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

RELATED ARTICLES
- Advertisment -
Google search engine

Most Popular