Monday, March 9, 2026
Google search engine

Homeರಾಜ್ಯಸುದ್ದಿಜಾಲಒಳ ಮೀಸಲಾತಿ ಜಾರಿ ನಂತರ ನೇಮಕಾತಿ ಭರ್ತಿ ಮಾಡಿ

ಒಳ ಮೀಸಲಾತಿ ಜಾರಿ ನಂತರ ನೇಮಕಾತಿ ಭರ್ತಿ ಮಾಡಿ

ವರದಿ : ಎಡತೊರೆ ಮಹೇಶ್

ಎಚ್.ಡಿ.ಕೋಟೆ: ನಮ್ಮ ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ, ಒಳ ಮೀಸಲಾತಿಯನ್ನು ಜಾರಿ ಮಾಡೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ(ಹುಚ್ಚಮ್ಮ) ಅವರ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಬಿನಿ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ನಾನು ಮತ್ತು ನಮ್ಮ ಸರ್ಕಾರ ಒಳ ಮೀಸಲಾತಿಯ ಪರವಾಗಿದೆ ಒಳ ಮೀಸಲಾತಿಯನ್ನು ಜಾರಿ ಮಾಡೇ ಮಾಡುತ್ತೇವೆ ನಾವು ಒಳ ಮೀಸಲಾತಿಯ ವಿರುದ್ಧವಾಗಿಲ್ಲ ಎಂದು ಹೇಳಿದರು.

ತಾಲೂಕು ಡಾಕ್ಟರ್ ಬಾಬು ಜಗಜೀವ ರಾಮ್ ವಿಚಾರ ವೇದಿಕೆಯ ಅಧ್ಯಕ್ಷ ಸಿ ತಿಮ್ಮಯ್ಯ ಮಾತನಾಡಿ ಒಳಮಿಸಲಾತಿ ಹೋರಾಟಕ್ಕೆ ನಮ್ಮ ಸಮುದಾಯ 35 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದೆ ಕಾಲ ಹಗರಣ ಮಾಡದೆ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಪಿ. ನಾಗರಾಜು ಮಾತನಾಡಿ ನಮ್ಮ ಸಮುದಾಯ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಿ ಮತದಾನ ಮಾಡಿದೆ. ಈಗಾಗಲೇ 56432 ಹುದ್ದೆಗಳಿಗೆ ಅರ್ಜಿ ಕರೆದಿದ್ದು ಇದಕ್ಕೆ ಒಳ ಮೀಸಲಾತಿಯನ್ನು ಅಳವಡಿಸಿ ಜಾರಿ ಮಾಡಬೇಕು ಇಲ್ಲದೆ ಹೋದರೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತೊರೆಯುವ ಕೆಲಸವನ್ನು ಸಮುದಾಯ ಮಾಡುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಮಾದಿಗ ಸಮುದಾಯ ಸುಮಾರು 35 ವರ್ಷಗಳಿಂದ ನಿರಂತರವಾಗಿ ಒಳ ಮೀಸಲಾತಿ ಹೋರಾಟ ಮಾಡಿಕೊಂಡು ಬರುತ್ತಿದೆ, ಒಳ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಿ ಇಲ್ಲ ವಿಷ ನೀಡಿ

ಕೃಷ್ಣಾಪುರ ಶಿವಯ್ಯ

ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ, ಸಂಸದ ಸುನಿಲ್ ಬೋಸ್, ಶಾಸಕ ಅನಿಲ್ ಚಿಕ್ಕಮಾದು, ರವಿಶಂಕರ್, ಎಂಎಲ್ಸಿ ಶಿವಕುಮಾರ್, ಡಾ.ಡಿ.ತಿಮ್ಮಯ್ಯ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಡಾ.ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ, ಮಾಜಿ ಅಧ್ಯಕ್ಷ ಪಿ ನಾಗರಾಜು, ಪರಶಿವಮೂರ್ತಿ, ಬೂದನೂರು ವೆಂಕಟೇಶ್, ಬೆಟ್ಟಸ್ವಾಮಿ, ಮಾತಂಗ ಜನ ಜಾಗೃತಿ ವೇದಿಕೆ ಅಧ್ಯಕ್ಷ ಬೂದನೂರು ರವೀಶ್, ಸಿ.ಕಾಳಪ್ಪಾಜಿ, ಕಲ್ಲಾಂಬಾಳು ಮಂಜು, ಗಿರಿ ಪ್ರಸಾದ್, ಶಿವಾಜಿ, ರವಿ, ಶಿವರಾಜಯ್ಯ, ಮಹದೇವು, ರಾಮಚಂದ್ರ, ದಾಸಪ್ಪ ಸೇರಿದಂತೆ ಹಲವು ಮುಖಂಡರು ಯುವಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular