ಮಂಡ್ಯ: ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ವೆಂಕಟರಮಣೇಗೌಡ ( ಸ್ಟಾರ್ ಚಂದ್ರು) ರವರ ಪರವಾಗಿ ಚಿತ್ರನಟ ದರ್ಶನ್ ರವರು ಮತಯಾಚಿಸಿದರು. ಸ್ಟಾರ್ ಚಂದ್ರುರವರನ್ನ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಚ್. ಬಿ. ರಾಮು ಮೇಲುಕೋಟೆ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಅಭ್ಯರ್ಥಿಯಾದ ವೆಂಕಟೇರಮಣೆಗೌಡ, ಉಮೇಶ್,ಹೊಳಲು ಗ್ರಾಮದ ಮುಖಂಡರಾದ ಜೆಟ್ಟಿ ಕುಮಾರ್ ,ಚಂದನ್, ಚೇತನ್ ನಿಂಗೇಗೌಡ, ಶ್ಯಾಮ್, ಕುಮಾರ್, ಮಹಿಳಾ ಮಹಿಳಾ ಮಂಡಳಿಯ ಸದಸ್ಯರುಗಳು ಕಾಂಗ್ರೆಸ್ ಕಾರ್ಯಕರ್ತರು ,ರೈತ ಸಂಘದ ಕಾರ್ಯಕರ್ತರು ಹಾಜರಿದ್ದರು..
ಇದಕ್ಕೂ ಮೊದಲು ಹೋದ ಕಡೆಯಲ್ಲ ಬಾರಿ ಗಾತ್ರದ ಹೂವಿನಹಾರ ಹಾಗೂ ಮೂಸಿಂಬಿ ಹಣ್ಣಿನ ಹಾರವನ್ನು ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಹೊಳಲು ಮಲ್ಲನಾಯಕನಕಟ್ಟೆ, ವಿ ಸಿ ಫಾರಂ, ಶಿವಳ್ಳಿ ದುದ್ದ,,ಬೇವುಕಲ್ ಮಾರ್ಗವಾಗಿ ಜಕ್ಕನಹಳ್ಳಿಯಲ್ಲಿ ಮತಯಾಚಿಸಿದರು.