Sunday, April 20, 2025
Google search engine

Homeಸ್ಥಳೀಯಚಲನ ಚಿತ್ರೋತ್ಸವ:  ಉತ್ತಮ ಕಿರು ಚಿತ್ರ ಆಯ್ಕೆ ಸಂಬಂಧ ವೀಕ್ಷಣೆ

ಚಲನ ಚಿತ್ರೋತ್ಸವ:  ಉತ್ತಮ ಕಿರು ಚಿತ್ರ ಆಯ್ಕೆ ಸಂಬಂಧ ವೀಕ್ಷಣೆ

ಮೈಸೂರು: ಚಲನಾ ಚಿತ್ರೋತ್ಸವ 2023ರ ಅಂಗವಾಗಿ ಕಿರು ಚಿತ್ರಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂಬಂಧವಾಗಿ ಪ್ರವಾಸೋದ್ಯಮ ಇಲಾಖೆಯ ಕೆ.ಎಸ್.ಟಿ.ಡಿ  ಹಾಲ್ ನಲ್ಲಿ ಕಿರು ಚಿತ್ರ ಸ್ಪರ್ಧೆಗೆ ಬಂತಂಹ 65  ಕಿರು ಚಿತ್ರಗಳನ್ನು ಚಲನ ಚಿತ್ರ ಕ್ಷೇತ್ರದಲ್ಲಿ  ಪರಿಣಿತಿ ಹೊಂದಿರುವವರು ಉತ್ತಮ ಕಿರು ಚಿತ್ರಗಳ ಆಯ್ಕೆ ಸಂಬಂಧ ಇಂದು ವೀಕ್ಷಿಸಿದರು.

ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ  ಕಿರು ಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು  ಚಲನ ಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದ್ದು ತೀರ್ಪುಗಾರರಿಂದ ಆಯ್ಕೆಯಾದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹತ್ತು ಕಿರು ಚಿತ್ರಗಳನ್ನು ಐನಾಕ್ಸ್ ನಲ್ಲಿ ಪ್ರದರ್ಶನ ಮಾಡಲಾಗುವುದು.

ಕಿರು ಚಿತ್ರ ಸ್ಪರ್ಧೆಗೆ ಬಂದಂತಹ ಕಿರು ಚಿತ್ರಗಳ ಆಯ್ಕೆ ಸಂಬಂಧ ತೀರ್ಪು ಗಾರರಾಗಿ ಕಾವಾದ ಶಿಲ್ಪ ಕಲಾ ವಿಭಾಗದ ಉಪನ್ಯಾಸಕರಾದ ವೀರಣ್ಣ ಮಾ ಅರ್ಕಸಾಲಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ ಹೇಮಚಂದ್ರ, ರಂಗಭೂಮಿ ಕಲಾವಿದರಾದ ಮೈಮ್ ರಮೇಶ್, ಉದಯವಾಣಿ ಹಿರಿಯ ವರದಿಗಾರಾದ ಗುರುರಾಜ ಕೂಡ್ಲಿಗಿ ಹಾಗೂ ಸಿನಿಮಾ ರಂಗದ ಛಾಯಾಗ್ರಾಹಕರಾದ ನಿರೀಕ್ಷಿತ್ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ‌ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ, ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕೆ.ಐ.ಡಿ.ಬಿ ಭೂ ಸ್ವಾಧೀನಾಧಿಕಾರಿಯಾದ ಪ್ರಿಯಾ ದರ್ಶಿನಿ, ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಉಪ ನಿರ್ದೇಶಕರಾದ ಅಶೋಕ್ ಕುಮಾರ್, ಸಹ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ಹಾಗೂ ಶ್ರೇಯಸ್ ಮತ್ತು ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular