Saturday, April 19, 2025
Google search engine

Homeಸ್ಥಳೀಯದಸರಾ ಉದ್ಘಾಟನೆಗೆ ಸುತ್ತೂರು ಶ್ರೀಗಳ ಹೆಸರನ್ನೇ ಫೈನಲ್ ಮಾಡಿ: ಶಾಸಕ ಟಿ ಎಸ್ ಶ್ರೀವತ್ಸ ಮನವಿ

ದಸರಾ ಉದ್ಘಾಟನೆಗೆ ಸುತ್ತೂರು ಶ್ರೀಗಳ ಹೆಸರನ್ನೇ ಫೈನಲ್ ಮಾಡಿ: ಶಾಸಕ ಟಿ ಎಸ್ ಶ್ರೀವತ್ಸ ಮನವಿ

ಮೈಸೂರು: ಸುತ್ತೂರು ಸಂಸ್ಥಾನಕ್ಕೆ ದೊಡ್ಡ ಪರಂಪರೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಠ ಮತ್ತು ಸ್ವಾಮೀಜಿ ಹೆಸರು ಗಳಿಸಿದ್ದಾರೆ. ಆದ್ದರಿಂದ ದಸರಾ ಉದ್ಘಾಟನೆಗೆ ಸುತ್ತೂರು ಶ್ರೀಗಳ ಹೆಸರನ್ನೇ ಫೈನಲ್ ಮಾಡಬೇಕು ಎಂದು ಕೆ ಆರ್ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಹಿರಿಯರಾಗಿದ್ದಾರೆ. ನಮ್ಮದೇ ಜಿಲ್ಲೆಯವರಿಗೆ ಅವಕಾಶ ಸಿಗಬೇಕು ಎಂದರು.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಸುತ್ತೂರು ಶ್ರೀಗಳ ಹೆಸರು ಪ್ರಸ್ತಾಪ ಮಾಡಿದ್ದೇನೆ. ಬೇರೆ ಯಾವುದೇ ಹೆಸರು ಈವರೆಗೆ ಪ್ರಸ್ತಾಪವಾಗಿಲ್ಲ. ಆದ್ದರಿಂದ ಸುತ್ತೂರು ಶ್ರೀಗಳ ಹೆಸರನ್ನೇ ಫೈನಲ್ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಈ ವೇಳೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾತಿನ ಭರಾಟೆಯಲ್ಲಿ ಈ ರೀತಿಯ ಹೇಳಿಕೆ ಹೊರ ಬಂದಿದೆ. ಈ ರೀತಿಯ ಪದ ಬಳಕೆ ಯಾರೇ ಮಾಡಿದರೂ ತಪ್ಪು. ಆರಗ ಜ್ಞಾನೇಂದ್ರ ಹಿರಿಯರು, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಆದರೆ ಮಾತನಾಡುವಾಗ ಪದ ಬಳಕೆಯ ಬಗ್ಗೆ ಜಾಗ್ರತೆ ವಹಿಸಬೇಕು ಎಂದಷ್ಟೇ ಹೇಳಬಹುದು.  ಶಾಸಕರಾದ ಬಳಿಕ ನಮಗೆ ನಡವಳಿಕೆ, ಪದಬಳಕೆ ಹಾಗೂ ಸದನದ ಒಳಗಿನ ವರ್ತನೆ ಬಗ್ಗೆ ಮೊದಲ ಪಾಠವೇ ಇರುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಯಾವ ವಿಚಾರಗಳನ್ನ ಗಂಭೀರವಾಗಿ ಪರಿಗಣಿಸಬೇಕೋ ಅದನ್ನ ಕಡೆಗಣಿಸಿದೆ. ಗ್ರೇನೇಡ್ ಸಿಕ್ಕರೂ ಭಯೋತ್ಪಾದಕ ಅಲ್ಲ ಎನ್ನುತ್ತಾರೆ. ಉಡುಪಿ ಕಾಲೇಜು ಪ್ರಕರಣವನ್ನು ಹುಡುಗಾಟ ಎನ್ನುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ ವಾಪಾಸ್ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಇಂತಹ ವಿಚಾರಗಳ ಬಗ್ಗೆ ನಾವು ಹೋರಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular