ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹೈನುಗಾರಿಕೆ ಗ್ರಾಮಾಂತರ ಪ್ರದೇಶದ ಜನರಿಗೆ ನೆಮ್ಮದಿಯ ಬದುಕು ನೀಡುವುದರ ಜತೆಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಬಿಎಂಸಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೊರೋನಾದಂತಹ ಸಂಕಷ್ಠದ ಸಮಯದಲ್ಲಿ ಲಕ್ಷಾಂತರ ಜನರ ಬದುಕು ಕಾಪಾಡಿದ ಹೈನು ಉಧ್ಯಮದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಂಡು ಇತರರಿಗೆ ಮಾದರಿಯಾದ ಬದುಕು ನಡೆಸಿ ಎಂದು ಸಲಹೆ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಕೆಲಸ ನಿರ್ವಹಿಸಿದರೆ ಆ ಮೂಲಕ ಸರ್ವವನ್ನು ಸಾಧಿಸಬಹುದಾಗಿದ್ದು ಸಹಕಾರಿಗಳು ಮತ್ತು ರೈತರು ಈ ದಿಸೆಯಲ್ಲಿ ಯೋಚಿಸಬೇಕೆಂದು ಕಿವಿಮಾತು ಹೇಳಿದರು.
ಸಂಘದ ಸದಸ್ಯರಾಗುವವರು ಗುಣಮಟ್ಟದ ಹಾಲು ಪೊರೈಕೆ ಮಾಡಿ ಮೈಮುಲ್ ಏಳಿಗೆಗೆ ಸಹಕಾರ ನೀಡುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪರಸ್ಪರ ಸಹಕಾರ ಮನೋಬಾವನೆಯಿಂದ ಕಾರ್ಯ ನಿರ್ವಹಿಸಬೇಕೆಂದು ನುಡಿದರು.
ಚನ್ನಂಗೆರೆ ಗ್ರಾಮದ ವಿವಿದ ಸಮುದಾಯ ಭವನಗಳಿಗೆ ಅನುದಾನ ನೀಡಲು ಕ್ರಮ ಕೈಗೊಳ್ಳುವುದರ ಜತೆಗೆ ಮುಂದಿನ ದಿನಗಳಲ್ಲಿ ಆಧ್ಯತೆಯ ಮೇರೆಗೆ ಅಭಿವೃದ್ದಿ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಢಿದ ಶಾಸಕರು ಈ ವಿಚಾರದಲ್ಲಿ ಸರ್ವರೂ ನನಗೆ ಸಹಕಾರ ನೀಡಬೇಕೆಂದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಹಕಾರ ಸಂಘಕ್ಕೆ ಶಾಸಕರ ನಿಧಿಯಿಂದ 3 ಲಕ್ಷ ರೂ ಅನುದಾನ ನೀಡಲಾಗಿದ್ದು, ಮುಂದೆ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಲ್ಲುತ್ತೇನೆಂದರು.
ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎನ್.ವಿಜಯಕುಮಾರ್, ಸಂಘದ ಮಾಜಿ ಅಧ್ಯಕ್ಷ ಸಿ.ಬಿ.ಮಲ್ಲಿಕಾರ್ಜುನ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ತಕ್ಷ ಹಾಡ್ಯಮಹದೇವಸ್ವಾಮಿ, ಸಾಲಿಗ್ರಾಮ ಮೈಮುಲ್ ಸಹಾಯಕ ವ್ಯವಸ್ಥಾಪಕ ಡಾ.ಪ್ರವೀಣ್ ಎಂ.ಪತ್ತಾರ್, ಸಮಾಲೋಚಕ ವಿಸ್ತರಣಾಧಿಕಾರಿ ಸಿ.ಜಿ.ಅಭಿಷೇಕ್, ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಎನ್.ನಾರಾಯಣಗೌಡ, ಸಿ ಆರ್ ಪಿ ಪ್ರಭು, ಸಂಘದ ಉಪಾಧ್ಯಕ್ಷ ಕರಿಯಯ್ಯ, ನಿರ್ದೇಶಕರಾದ ಶೇಷಾದ್ರಿ, ಸಿ.ಎನ್.ಪರಶಿವ, ಸಿ.ಎಂ.ಅರುಣ್ ಕುಮಾರ್, ನೀಲಕಂಠಪ್ಪ, ಸಿ.ಎಂ.ನಟೇಶ್, ನಾಗನಾಯಕ, ಸಿ.ಎಂ.ರಾಜೇಗೌಡ, ರಾಜಶೆಟ್ಟಿ, ಸಿ.ಎಸ್.ಹರೀಶ್, ಧನಲಕ್ಷ್ಮೀ, ಲೀಲಾವತಿ, ಕಾರ್ಯದರ್ಶಿ ಶ್ರೀಧರ್ ಮತ್ತಿತರರು ಇದ್ದರು.