Friday, April 18, 2025
Google search engine

Homeಅಪರಾಧವಿಕ್ರಾಂತ್ ರೋಣಾ ಸಿನಿಮಾ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್‌ಐಆರ್ ದಾಖಲು

ವಿಕ್ರಾಂತ್ ರೋಣಾ ಸಿನಿಮಾ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದಂತ ಪಿಸಿಆರ್ ಆಧರಿಸಿ, ವಿಕ್ರಾಂತ್ ರೋಣಾ, ಡೆಡ್ಲಿ ಸೋಮ ಸಿನಿಮಾ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸ್ಯಾಂಡಲ್ ವುಡ್ ನಿರ್ಮಾಪಕ ಶಿವಶಂಕರ್ ಎಂಬುವರು ಕೋರ್ಟ್ ಗೆ ನಿರ್ಮಾಪಕ ಜಾಕ್ ಮಂಜು ಮೋಸ ಮಾಡಿದ್ದಾರೆ ಎಂಬುದಾಗಿ ಪಿಸಿಆರ್ ದಾಖಲಿಸಿದ್ದರು. ಈ ಅರ್ಜಿಯ ಆಧಾರದ ಮೇಲೆ ಕೋರ್ಟ್ ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಸಿದ್ದೇಶ್, ಮುರುಳಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿತ್ತು. ಹೀಗಾಗಿ ಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಜಾಕ್ ಮಂಜು ಕೂಡ ಶಿವಶಂಕರ್ ಅವರಿಗೆ ಪರಿಚಯ ಮಾಡಲಾಗಿತ್ತು. ಮಾಯಾನಗರಿ ಚಿತ್ರಕ್ಕೆ ಹೂಡಿಕೆ ಮಾಡಿದ್ದಂತ ಹಣವನ್ನು ಶಿವಶಂಕರ್ ವಾಪಾಸ್ ಕೇಳಿದ್ದರು. ಆದರೇ ಕೊಟ್ಟಿರಲಿಲ್ಲ. ಜಾಕ್ ಮಂಜು ಅವರನ್ನು ಕೊಡಿಸುವಂತೆ ಕೇಳಲಾಗಿತ್ತು. ಅದಕ್ಕೂ ಉತ್ತರಿಸಲಾಗಿರಲಿಲ್ಲ. ಹೀಗಾಗಿ ಕೋರ್ಟ್ ಗೆ ಶಿವಶಂಕರ್ ಹಣ ಮೋಸ ಮಾಡಿದಂತ ಆರೋಪದಲ್ಲಿ ಪಿಸಿಆರ್ ಸಲ್ಲಿಸಿ, ನಿರ್ಮಾಪಕ ಜಾಕ್ ಮಂಜು, ಸಿದ್ದೇಶ್, ಮುರುಳಿ ಎಂಬುವರ ವಿರುದ್ಧ ಎಫ್‌ಐಆರ್ ಗೆ ಕೋರಿದ್ದರು. ಕೋರ್ಟ್ ಇವರ ಅರ್ಜಿಯನ್ನು ಪರಿಗಣಿಸಿ, ಪೊಲೀಸರಿಗೆ ಸೂಚಿಸದ ಪರಿಣಾಮ ಈಗ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular