Saturday, April 19, 2025
Google search engine

Homeಅಪರಾಧಅಗ್ನಿ ಅವಘಡ: ಕುವೈತ್‌ನಲ್ಲಿ ಕೇರಳದ ನಾಲ್ವರು ಸಾವು

ಅಗ್ನಿ ಅವಘಡ: ಕುವೈತ್‌ನಲ್ಲಿ ಕೇರಳದ ನಾಲ್ವರು ಸಾವು

ಕುವೈತ್: ಕುವೈತ್‌ನ ಅಬ್ಬಸ್ಸಿಯಾ ಎಂಬಲ್ಲಿನ ತಮ್ಮ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೇರಳದ ಪಟ್ಟಣಂತಿಟ್ಟ ಮೂಲದ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಮ್ಯಾಥ್ಯೂ ಮುಝಕ್ಕಲ್, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್ ಮತ್ತು ಎರಿನ್ ಎಂದು ಗುರುತಿಸಾಗಿದೆ.
ರಜೆಯನ್ನು ತಮ್ಮ ಊರಾದ ನೆಡುಂಬಸ್ಸೆರಿಯಲ್ಲಿ ಕಳೆದು ಗುರುವಾರ ರಾತ್ರಿಯಷ್ಟೇ ಕುಟುಂಬ ಕುವೈತ್‌ಗೆ ಮರಳಿತ್ತು. ಮ್ಯಾಥ್ಯೂ ಕುವೈತ್‌ನಲ್ಲಿ ೧೫ ವರ್ಷಗಳಿಂದ ಉದ್ಯೋಗದಲ್ಲಿದ್ದರು. ಪತ್ನಿ ನರ್ಸ್ ಆಗಿದ್ದರು, ಮಕ್ಕಳೂ ಕುವೈತ್‌ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೊಠಡಿಯಲ್ಲಿದ್ದ ಎಸಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular