Friday, April 18, 2025
Google search engine

Homeಅಪರಾಧಬೆಳಗಾವಿಯಲ್ಲಿ ಅಗ್ನಿ ಅವಘಡ : ಇಬ್ಬರು ಕಾರ್ಮಿಕರು ಸಾವು

ಬೆಳಗಾವಿಯಲ್ಲಿ ಅಗ್ನಿ ಅವಘಡ : ಇಬ್ಬರು ಕಾರ್ಮಿಕರು ಸಾವು

ಬೆಳಗಾವಿ : ಬೆಳಗಾವಿಯಲ್ಲಿ ತಡರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನಾಪತ್ತೆಯಾಗಿದ್ದ ಕಾರ್ಮಿಕ ಯಲ್ಲಪ್ಪ ಗುಂಡ್ವಾಳ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿಯ ನಾವಗೆಯ ಸ್ನೇಹಂ ಸೆಲೋ ಟೇಪ್ ತಯಾರಿಕಾ ಕಂಪನಿಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾಗಿದ್ದ ಕಾರ್ಮಿಕ ಯಲ್ಲಪ್ಪ ಗುಂಡ್ವಾಳ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಎನ್ನಲಾಗಿತ್ತು. ಇದೀಗ ಯಲ್ಲಪ್ಪ ಶವ ಪತ್ತೆಯಾಗಿದ್ದು, ಜೆಸಿಬಿ ಮೂಲಕ ಗೋಡೆ ಹೊಡೆದು ಶವವನ್ನು ಹೊರಗೆ ತೆಗೆಯಲಾಗಿದೆ.

ಅಗ್ನಿ ಅವಘಡ ಸಂದರ್ಭದಲ್ಲಿ ಒಟ್ಟು ೧೫೩ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರೆ. ಮತ್ತೊಬ್ಬ ಕಾರ್ಮಿಕ ಯಲ್ಲಪ್ಪ ಎಂಬುವರು ನಾತ್ತೆಯಾಗಿದ್ದಾರೆ. ಸತತ ೫ ಗಂಟೆಗಳಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular