Monday, April 21, 2025
Google search engine

Homeಅಪರಾಧಮೀನುಗಾರಿಕಾ ಬೋಟ್‌ನಲ್ಲಿ ಬೆಂಕಿ.. ಲಕ್ಷಾಂತರ ರೂಪಾಯಿ ನಷ್ಟ

ಮೀನುಗಾರಿಕಾ ಬೋಟ್‌ನಲ್ಲಿ ಬೆಂಕಿ.. ಲಕ್ಷಾಂತರ ರೂಪಾಯಿ ನಷ್ಟ

ಮಂಗಳೂರು : ಮೀನುಗಾರಿಕಾ ಬೋಟೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ಇಂದು ನಡೆದಿದೆ. ಮುಂಜಾನೆ ೪.೩೦ರ ಸುಮಾರಿಗೆ ಬೆಂಕಿ ಅವಘಡ ನಡೆದಿದ್ದು, ಅರುಣ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಕದ್ರಿ, ಪಾಂಡೇಶ್ವರ್ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೋಟ್ ಬೆಂಕಿಗೆ ಆಹುತಿಯಾಗಿದ್ದರಿಂದ ಲಕ್ಷಾಂತರ ಮೌಲ್ಯದ ನಷ್ಟ ಉಂಟಾಗಿದೆ.

ಅದೃಷ್ಟವಶಾತ್ ಬೋಟ್‌ನಲ್ಲಿ ಯಾರು ಇರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಬಂದರಿನಲ್ಲಿ ಲಂಗರು ಹಾಕಿದ್ದ ಇತರ ಬೋಟ್‌ಗಳಿಗೆ ಹರಡುವ ಭೀತಿ ಎದುರಾಗಿತ್ತು. ಅದೃಷ್ಟವಶಾತ್ ಬೆಂಕಿಯ ರಭಸಕ್ಕೆ ದಡದಲ್ಲಿದ್ದ ಬೋಟು ನದಿ ನೀರಿನ ಮಧ್ಯೆ ಸಾಗಿದೆ. ಇದರಿಂದಾಗಿ ಇತರ ಬೋಟ್‌ಗಳಿಗೆ ಬೆಂಕಿ ತಗುಲುವುದು ತಪ್ಪಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

RELATED ARTICLES
- Advertisment -
Google search engine

Most Popular