ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬದಲ್ಲಿನ ಪಟಾಕಿ ದುರಂತಗಳು ಮುಂದುವರೆದಿವೆ. ಇಂದು ಶನಿವಾರ ಪಟಾಕಿ ಸಿಡಿತದಿಂದಾಗಿ ೯ ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಪಟಾಕಿ ದುರಂತಗಳಲ್ಲಿ ಗಾಯಗೊಂಡವರ ಸಂಖ್ಯೆ ೩೮ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಲ್ಲಿ ಪಟಾಕಿ ಸಿಡಿತದಿಂದ ೯ ಮಂದಿ ಗಾಯಗೊಂಡಿದ್ದಾರೆ. ಮಕ್ಕಳು ಸೇರಿದಂತೆ ಹಿರಿಯರಾದಿಯಾಗಿ ೯ ಮಂದಿಗ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ.
ಪಟಾಕಿ ಸಿಡಿತದಿಂದ ಕಣ್ಣು, ಕೈ ಸೇರಿದಂತೆ ಇತರೆ ಗಾಯಗಳು ಆಗಿದ್ದಾವೆ. ಅವರನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈವರೆಗೆ ೩೮ ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಂತೆ ಆಗಿದೆ.