Friday, April 18, 2025
Google search engine

Homeಅಪರಾಧಪಟಾಕಿ ಅವಘಡ : ಬೆಂಗಳೂರಿನಲ್ಲಿ ೨೫ ಮಂದಿ ಆಸ್ಪತ್ರೆಗೆ ದಾಖಲು

ಪಟಾಕಿ ಅವಘಡ : ಬೆಂಗಳೂರಿನಲ್ಲಿ ೨೫ ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ನಗರದಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದರೂ ೨೫ ಪಟಾಕಿ ಅವಘಡ ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯಿಂದ ಇಲ್ಲಿಯವರೆಗೆ ಏಳು ಜನರು ಪಟಾಕಿ ಸಂಬಂಧಿತ ಗಾಯಗಳ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಗಾಯಾಳುಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಐವರಿಗೆ ಓಪಿಡಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇವರಲ್ಲಿ ೧೦ ವರ್ಷದ ಬಾಲಕಿ ಮತ್ತು ೧೮ ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ.

ನಾರಾಯಣ ನೇತ್ರಾಲಯದಲ್ಲಿ ಪಟಾಕಿಯಿಂದ ೧೬ ಮಂದಿ ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡವರೇ ಹೆಚ್ಚಾಗಿದ್ದಾರೆ. ಇವರಲ್ಲಿ ಟೈಲರ್ ಒಬ್ಬರು ಮತ್ತು ೧೯ ವರ್ಷದ ಯುವಕನಿಗೆ ಗಂಭೀರ ಗಾಯವಾಗಿದೆ. ಉಳಿದ ಗಾಯಾಳುಗಳಿಗೆ ಸಣ್ಣಪುಟ್ಟ ಚಿಕಿತ್ಸೆಯ ಅಗತ್ಯವಿದ್ದು, ನೀಡಲಾಗುತ್ತಿದೆ. ಮುಂದಿನ ೪೮ ಗಂಟೆಗಳ ಕಾಲ ಗಾಯಾಳುಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದ್ದು, ಅವರಿಗೆ ಯಾವುದೇ ಶಾಶ್ವತ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದೀಪಾವಳಿ ಹಬ್ಬಕ್ಕಿರುವ ಸಂಭ್ರಮ ಸಡಗರ ಯಾವ ಹಬ್ಬದಲ್ಲೂ ಇಲ್ಲ. ದೀಪಾವಳಿ ಎಂದರೆ ಕೆಲವರಿಗೆ ಪೂಜೆ ಪುನಸ್ಕಾರ, ಇನ್ನೂ ಕೆಲವರಿಗೆ ಪಟಾಕಿ ಸಿಡಿಸುವುದೇ ಹಬ್ಬವಾಗಿರುತ್ತದೆ. ಆದರೆ ಪಟಾಕಿ ಸಿಡಿಸುವ ಭರದಲ್ಲಿ ನಿಮ್ಮ, ನಿಮ್ಮವರ ಪ್ರಾಣದ ಮೇಲೂ ಎಚ್ಚರವಿರಲಿ. ನಮ್ಮ ಸಂತೋಷ ಇನ್ನೊಬ್ಬರಿಗೆ ದುಖಃವಾಗದಿರಲಿ. ಮಕ್ಕಳನ್ನು ಆದಷ್ಟು ಬೆಂಕಿ, ಪಟಾಕಿ ಸಿಡಿಯುವ ವೇಳೆ ದೂರವಿಡಿ. ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ರಕ್ಷಣಾತ್ಮಕ ಕನ್ನಡಕ ಬಳಸಿ. ಗಾಯಗಳಾದರೆ ನಿರ್ಲಕ್ಷ್ಯ ತೋರದೇ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ.

RELATED ARTICLES
- Advertisment -
Google search engine

Most Popular