ಹೊಸದಿಲ್ಲಿ: ದೇಶಾದ್ಯಂತ ೨೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ೧೦೨ ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಎಪ್ರಿಲ್ ೧೯ರಂದು ನಡೆಯಲಿರುವುದರಿಂದ ಅಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳ ಪರವಾಗಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಹೆಚ್ಚಿನ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಮಾರ್ಚ್ ೨೭ ಕೊನೆಯ ದಿನಾಂಕವಾಗಿದೆ. ಆದರೆ ಬಿಹಾರದಲ್ಲಿ ಹಬ್ಬವೊಂದರ ಕಾರಣ ಅಂತಿಮ ದಿನಾಂಕವನ್ನು ಮಾರ್ಚ್ ೨೮ಕ್ಕೆ ವಿಸ್ತರಿಸಲಾಗಿದೆ. ನಾಮಪತ್ರಗಳ ಪರಿಶೀಲನೆ ಮಾರ್ಚ್ ೨೮ರಂದು ನಡೆಯಲಿದೆ. ಆದರೆ ಬಿಹಾರದಲ್ಲಿ ಈ ಪ್ರಕ್ರಿಯೆ ಮಾರ್ಚ್ ೩೦ರಂದು ನಡೆಯಲಿದೆ.