ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ೧೧ ಗಂಟೆಯವರೆಗೆ ೨೬.೭೨% ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇಂದು ಬುಧವಾರ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಮೊದಲ ಹಂತದಲ್ಲಿ ೨೭ ಜಿಲ್ಲೆಗಳಿಗೆ ಮತದಾನ ನಡೆಯುತ್ತಿದೆ. ೧೦ ವರ್ಷಗಳ ನಂತ್ರ ನಡೆಯುತ್ತಿರುವಂತ ಮತದಾನದಲ್ಲಿ ಜನರು ಹುರುಪಿನಿಂದಲೇ ಭಾಗಿಯಾಗಿದ್ದಾರೆ.
ಹೀಗಿದೆ ಶೇಕಡಾ ಮತದಾನದ ಪ್ರಮಾಣ
ಅನಂತ್ನಾಗ್- ೨೫.೫೫%
ದೋಡಾ – ೩೨.೩೦%
ಕಿಶ್ತ್ವಾರ್ – ೩೨.೬೯%
ಕುಲ್ಗಾಮ್ – ೨೫.೯೫%
ಪುಲ್ವಾಮಾ – ೨೦.೩೭%
ರಂಬನ್ – ೩೧.೨೫%
ಶೋಪಿಯಾನ್ – ೨೫.೯೬%