ಎಚ್ ಡಿ ಕೋಟೆ:ಎಚ್ ಡಿ ಕೋಟೆ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಯರಹಳ್ಳಿ ಶಾಲೆಯ ಮಕ್ಕಳು ಬಾಲಕಿಯರ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕಿಯರ ವಾಲಿಬಾಲ್ ತಂಡಕ್ಕೆ ಡಿ ಆರ್ ಎಸ್ ಓ ಚಂದನ್ ಮತ್ತು ಜಂಗಮ ಫೌಂಡೇಶನ್ ವತಿಯಿಂದ ಟ್ರ್ಯಾಕ್ ಶೂಟ್ ಅನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ದೈಹಿಕ ಶಿಕ್ಷಕರಾದ ರವಿ ಎಸ್ ಎಲ್ ರವರು ಖಾಸಗಿ ಶಾಲೆಯಲ್ಲಿ ಕ್ರೀಡಾಪಟು ಮಕ್ಕಳುಗಳಿಗೆ ಉತ್ತಮವಾದ ಸಮವಸ್ತ್ರಗಳನ್ನು ನೀಡುತ್ತಾರೆ ಆದರೆ ನಮ್ಮ ಸರ್ಕಾರಿ ಶಾಲೆಯ ಬಡ ಕ್ರೀಡಾಪಟುಗಳು ಕ್ರೀಡಾ ಸಮಾವೇಶಗಳಿಲ್ಲದೆ ಶಾಲಾ ಸಮವಸ್ತ್ರದಲ್ಲಿಯೇ ನಮ್ಮ ಶಾಲೆಗೆ ಪ್ರಥಮ ಸ್ಥಾನ ತಂದು ಕೊಟ್ಟಿದ್ದಾರೆ. ಮತ್ತು ಜಿಲ್ಲಾ ತಂಡಕ್ಕೆ ಮಟ್ಟಕ್ಕೆ ಆಯ್ಕೆ ಆಗಿರುವುದನ್ನು ಮನಗಂಡ ಜಂಗಮ ಫೌಂಡೇಶನ್ ಮತ್ತು ಡಿ ಆರ್ ಎಫ್ ಓ ಚಂದನ್ ರವರಿಗೆ ನಮ್ಮ ಶಾಲೆಯ ಸುಮಾರು 12 ಬಾಲಕಿಯರ ಸದಸ್ಯರನ್ನು ಹೊಂದಿರುವ ವಾಲಿಬಾಲ್ ತಂಡಕ್ಕೆ ಟ್ರ್ಯಾಕ್ ಶೂಟ್ ನೀಡಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ವಿಶ್ವನಾಥ್ ಪ್ರಸಾದ್ ಶಿಕ್ಷಕರಾದ ಮಹದೇವಯ್ಯ ಶಿಕ್ಷಕ ವೃಂದ ಮತ್ತು ಪುರಸಭೆಯ ಸದಸ್ಯರಾದ ಕರಾಟೆ ಪ್ರೇಮ್ ಹಾಗೂ ಪ್ರಕಾಶ್ ಬುದ್ಧ ಮುಂತಾದವರು ಹಾಜರಿದ್ದರು.