ಪರ್ತ್: ತವರಿನ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ತನ್ನ ಹಿಂದಿನ ಸರಣಿಯ ಸೋಲಿನ ಕಹಿ ಮರೆತು ಪರ್ತ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ದ್ವಿತೀಯ ಇನಿಂಗ್‌್ಸ ನಲ್ಲಿ ಗೆಲುವು ಸಾಧಿಸಲು ಆಸ್ಟ್ರೇಲಿಯಾ 534 ರನ್ ಗಳ ಗುರಿ ಪಡೆದಿತ್ತು. ಆದರೆ 3ನೇ ದಿನದಾಟಕ್ಕೆ 12 ರನ್ ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು.
ಇಂದು ಪಂದ್ಯದ ಆರಂಭದಲ್ಲೇ ವೇಗಿ ಮೊಹಮದ್ ಸಿರಾಜ್ ಅವರು ಉಸಾನ್ ಖ್ವಾಜಾ ಅವರ ವಿಕೆಟ್ ಪಡೆದು ಆಘಾತ ನೀಡಿದರು. ಆದರೆ ಸ್ಟೀವನ್ ಸಿತ್ (17 ರನ್) ಹಾಗೂ ಟ್ರಾವಿಸ್ ಹೆಡ್ (89 ರನ್) ಅವರು ಅಲ್ಪ ಹೋರಾಟ ತೋರುವ ಮೂಲಕ ಆಸ್ಟ್ರೇಲಿಯಾ ಪಾಳೆಯದಲ್ಲಿ ಸಂತಸ ಮೂಡಿಸಿದರು.
ಆದರೆ ಭಾರತ ತಂಡದ ಸಾಂಘಿಕ ಬೌಲಿಂಗ್ ಹೋರಾಟದಿಂದ 238 ರನ್ ಗಳಿಗೆ ಅಲೌಟ್ ಆಗುವ ಮೂಲಕ 295 ರನ್ ಗಳಿಂದ ಸೋಲು ಕಂಡಿತು. ಮಿಚೆಲ್ ಮಾರ್ಷ್ (47 ರನ್) ಹಾಗೂ ಅಲೇಕ್ಸ್ ಕೇರಿ (38 ರನ್) ಕೂಡ ಅಲ್ಪ ಹೋರಾಟ ನಡೆಸಿದರು. ಭಾರತ ತಂಡದ ಪರ ಜಸ್ ಪ್ರೀತ್ ಬುಮ್ರಾ ಹಾಗೂ ಮೊಹಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 2, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾ ತಾಲಾ ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ಬ್ಯಾಟರ್ ಗಳ ಸದ್ದಗಡಿಸಿದ ಬುಮ್ರಾ ಪಂದ್ಯ ಶ್ರೇಷ್ಠರಾದರು.