ಮಂಡ್ಯ : ಒಂದೇ ಕುಟುಂಬದ ಐವರು ಜಲಸಮಾಧಿ ಆಗಿರುವಂತಹ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ. ಚೈತ್ರ(20), ಶ್ವೇತಾ (38), ವಿಜಯಮ್ಮ(50), ಪ್ರಿಯಾಂಕ(28) ಮತ್ತು ಮಹೇಶ್ ಮೃತರು. ಸದ್ಯ ಕಾರ್ಯಚರಣೆ ನಡೆಸಿ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಐವರ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.
ಚನ್ನಪಟ್ಟಣ ಮೂಲದ ಒಂದೇ ಕುಟುಂಬದ ಐವರು ಇಂದು ಸಂಜೆ 4.45ಕ್ಕೆ ಮುತ್ತತ್ತಿಯ ಮುತ್ತತ್ತಿರಾಯ ದೇಗುಲಕ್ಕೆ ಬಂದಿದ್ದರು. ಈ ವೇಳೆ ಕಾವೇರಿ ನದಿಗಿಳಿದು ಫೋಟೋ ತೆಗೆದುಕೊಳ್ಳಲು ಹೋಗಿ ದುರ್ಘಟನೆ ಸಂಭವಿಸಿದೆ.



