ಆಂಧ್ರಪ್ರದೇಶ: ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಅನಕಾಪಲ್ಲಿಯಲ್ಲಿ ನಡೆದಿದೆ.
ಆತ್ಮಹತ್ಯೆ ಯತ್ನದಲ್ಲಿ ಬದುಕುಳಿದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಲಬಾಧೆಯಿಂದ ಇವರೆಲ್ಲರೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಗುಂಟೂರು ಜಿಲ್ಲೆಯ ತೆನಾಲಿಯ ಅಕ್ಕಸಾಲಿಗ ಶಿವರಾಮಕೃಷ್ಣ ಅವರ ಕುಟುಂಬ ಕೆಲ ದಿನಗಳಿಂದ ಅನಕಾಪಲ್ಲಿಯಲ್ಲಿ ನೆಲೆಸಿದ್ದು. ಗುರುವಾರ ರಾತ್ರಿ ಇವರೆಲ್ಲರೂ ಸೈನೈಡ್ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಅವರಲ್ಲಿ ಶಿವರಾಮಕೃಷ್ಣ (40), ಮಾಧವಿ (38), ಪುತ್ರಿಯರಾದ ವೈಷ್ಣವಿ (16) ಮತ್ತು ಲಕ್ಷ್ಮಿ (13) ಮೃತಪಟ್ಟಿದ್ದಾರೆ. ಆದ್ರೆ ಮತ್ತೋರ್ವ ಪುತ್ರಿ ಕುಸುಮಪ್ರಿಯಾ (13) ಬದುಕುಳಿದಿದ್ದು, ಅನಕಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಕ್ಷಣ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.