ರಾಮನಗರ: ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭೆ ಚುನಾವಣೆ-೨೦೨೪ರ ಅಂಗವಾಗಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಪಂಜಿನ ಮೆರವಣಿಗೆಯನ್ನು ಚನ್ನಪಟ್ಟಣ ನಗರಸಭೆಯಿಂದ ಪ್ರಾರಂಭಿಸಿ ಪೇಟೆ ಬೀದಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿವಾಗಿ ಮತದಾನ ಮಾಡುವೆ ಎಂಬ ಘೋವಾಕ್ಯ ಮೊಳಗುವುದರ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮನು ಬಿ.ಕೆ, ನಗರಸಭೆ ಪೌರಾಯುಕ್ತರಾದ ಪುಟ್ಟಸ್ವಾಮಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಿದ್ದರಾಜು, ವ್ಯವಸ್ಥಾಪಕರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಹರೀಶ್ ಬಾಬು, ಹೇಮಂತ್, ತಾಲ್ಲೂಕು ಐಇಸಿ ಭವ್ಯ, ನಗರಸಭೆ ಪೌರ ಕಾರ್ಮಿಕರು ಹಾಗೂ ಇತರರು ಭಾಗಿಯಾಗಿದ್ದರು.