Friday, April 11, 2025
Google search engine

Homeಆರೋಗ್ಯFlax Seeds: ಚಪ್ಪಟೆ ಅಗಸೆಬೀಜದ ಆರೋಗ್ಯ ಮಹಾತ್ಮೆ

Flax Seeds: ಚಪ್ಪಟೆ ಅಗಸೆಬೀಜದ ಆರೋಗ್ಯ ಮಹಾತ್ಮೆ

ಅಗಸೆಬೀಜ ನೋಡಲು ಚಪ್ಪಟೆ, ಪುಟ್ಟ ಗಾತ್ರದ್ದು ಆದರೆ ಪ್ರಯೋಜನಗಳು ಬೆಟ್ಟದಷ್ಟು. ಇದು ಆರೋಗ್ಯಕರವಾದ ಸೂಪರ್‌ಫುಡ್‌ಗಳಲ್ಲಿ ಒಂದು ಎನ್ನುವುದು ತಜ್ಞರ ಅಭಿಪ್ರಾಯ. ಯಾಕೆಂದರೆ, ಇದರಲ್ಲಿ ಸಮೃದ್ದವಾಗಿರುವ ಮೂರು ಪ್ರೊಟೀನ್ ಯುಕ್ತ ಅಂಶಗಳು. ಅನೇಕ ಪೋಷಕಾಂಶಗಳನ್ನು ಹೊಂದಿರುವ ಅಗಸೆಬೀಜದಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಫ್ಲಾಕ್ಸ್ ಬೀಜಗಳು ಎಂದೂ ಕರೆಯಲ್ಪಡುವ ಅಗಸೆಬೀಜವನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದ್ದ ಬಗ್ಗೆ ಮಾಹಿತಿಯನ್ನು ತಿಳಿಯ ಬಹುದಾಗಿದೆ. ಈಜಿಪ್ಟ್‌ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಅಗಸೆಬೀಜ ಬಳಸಲು ಆರಂಭಿಸಿದ ಬಗ್ಗೆ ಇತಿಹಾಸದ ಪುಟದಲ್ಲಿ ದಾಖಲಾಗಿದೆಯಂತೆ.

ಆರೋಗ್ಯ ಬಲವರ್ಧನೆಗೆ ಉಪಯೋಗವಾಗಿರುವ ಅಗಸೆಬೀಜದಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಯಾವುವು? ಇದರ ಸೈಡ್ ಎಫೆಕ್ಟ್ ಏನು ಎನ್ನುವುದನ್ನು ತಿಳಿಯೋಣ.

Flax Seeds Benefits: ಅಗಸೆ ಬೀಜವನ್ನು ಸೇವಿಸುವುದರಿಂದ ಆಗುವ ಉಪಯೋಗಗಳು

ಅಗಸೆಬೀಜದಲ್ಲಿ ಕೊಬ್ಬಿನಾಮ್ಲ, ಫೈಬರ್, ಪ್ರೊಟೀನ್ ಮುಂತಾದ ವಿಟಮಿನ್ ಗಳು ಯಥೇಚ್ಚವಾಗಿ ಇರುವುದರಿಂದ ಹಲವು ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ.

1. ಹೃದಯ ಸಂಬಂಧಿ ಕಾಯಿಲೆಗಳಿಗೆ ಸೂಕ್ತ ಅಗಸೆಬೀಜವನ್ನು ಅಗಸೆ ಸಸ್ಯದಿಂದ ಸಂಗ್ರಹಿಸಲಾಗುತ್ತದೆ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಅಂಶವನ್ನು ಇದು ಹೊಂದಿದೆ. ಹೆಚ್ಚಿನ ಫೈಬರ್ ಅಂಶವನ್ನು ಅಗಸೆಬೀಜ ಹೊಂದಿರುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಸೂಕ್ತ ಎಂದು ಹೇಳಲಾಗುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಬಹುದು ಅಥವಾ ನಿಯಮಿತವಾಗಿ ಹುರಿದು ತಿನ್ನಬಹುದು. ಆದರೆ, ವೈದ್ಯರ ಸಲಹೆಗಳನ್ನು ಪಡೆದು ಅಗಸೆಬೀಜದ ಬಳಕೆ ಸೂಕ್ತ.

2. ಚರ್ಮ, ಕೂದಲಿನ ಆರೋಗ್ಯ ರಕ್ಷಣೆಗೂ ಅಗಸೆಬೀಜ ಒಮೆಗಾ -3 ಕೊಬ್ಬಿನಿಂದ ಅಗಸೆಬೀಜ ಸಮೃದ್ಧವಾಗಿರುವುದರಿಂದ ಇದು ಕೊಲೆಸ್ಟ್ರಾಲ್ ಕಮ್ಮಿ ಮಾಡಲು ಸಹಾಯಕಾರಿಯಾಗಿದೆ. ಇದರ ಜೊತೆಗೆ, ಇದು ಚರ್ಮ ಮತ್ತು ಕೂದಲಿನ ರಕ್ಷಣೆಗೂ ಉತ್ತಮ. ಇನ್ನು ಅತಿಯಾದ ತೂಕದಿಂದ ಬಳಲುತ್ತಿರುವವರಿಗೆ, ಜೀರ್ಣದ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ, ಋತುಚಕ್ರವನ್ನು ನಿಯಂತ್ರಿಸಲು ಕೂಡಾ ಇದು ಉತ್ತಮ.

3. ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯಕ ಅಗಸೆಬೀಜದಲ್ಲಿ ಪ್ರೊಟೀನ್ ಗಳು ಹೇರಳವಾಗಿರುವುದರಿಂದ, ಇದರ ನಿಯಮಿತ ಬಳಕೆಯಿಂದಾಗಿ ಹೆಂಗಸರ ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಕಾರಿಯಾಗಲಿದೆ. ಅಗಸೆಬೀಜ ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಜೊತೆಗೆ, ಸ್ತನ ಕ್ಯಾನ್ಸರ್ ಮತ್ತು ಋತುಚಕ್ರದ ಸಮಸ್ಯೆಗೂ ಮನೆಮದ್ದಾಗಿದೆ.

4. ದೇಹವನ್ನು ಬೆಚ್ಚಗೆ ಇಡಲು ಸಹಾಯಕಾರಿ ಅಗಸೆಬೀಜ ಮಾನವನ ದೇಹವನ್ನು ಬೆಚ್ಚಗೆ ಇಡಲು ಸಹಾಯಕಾರಿಯಾಗಲಿದೆ. ಇದನ್ನು ಪುಡಿ ಮಾಡಿ ಸೇವಿಸಬಹುದು, ಹಾಗೆಯೇ ಸೇವಿಸಿದರೆ ಜೀರ್ಣ ಮಾಡಿಕೊಳ್ಳಲು ಕಷ್ಟಪಡಬೇಕಾಗಬಹುದು. ಪುಡಿ ಮಾಡಿದ ಅಗಸೆ ಬೀಜಗಳನ್ನು ನೀರಿನ ಜೊತೆ ಪ್ರತಿದಿನವೂ ಸೇವಿಸಬಹುದು. ಇದು ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಇವುಗಳನ್ನು ಸೇವಿಸಿದ ಸಂದರ್ಭದಲ್ಲಿ ತಪ್ಪದೆ ನೀರನ್ನು ಹೆಚ್ಚು ಸೇವಿಸಬಹುದು ಮತ್ತು ಇದನ್ನು ನಿಯಮಿತವಾಗಿ ಹುರಿದು ಕೂಡಾ ತಿನ್ನಬಹುದು.

ಅಗಸೆಬೀಜದ ಸೈಡ್ ಎಫೆಕ್ಟ್ ಗಳು:

1. ಗರ್ಭಿಣಿಯರು ಅಗಸೆಬೀಜ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಸೂಕ್ತ, ಅಗಸೆಬೀಜಗಳಲ್ಲಿನ ಫೈಬರ್ ಅಂಶವು ಕೆಲವು ಇಂಗ್ಲಿಷ್ ಔಷಧಿಗಳ ಜೊತೆ ಹೊಂದಾಣಿಕೆ ಆಗದೇ ಇರಬಹುದು. ಗ್ಯಾಸ್ ಸ್ಟಿಕ್, ಹೊಟ್ಟೆನೋವು, ಅತಿಸಾರ, ಮಲಬದ್ದತೆ, ವಾಕರಿಕೆ ಮುಂತಾದ ಸೈಡ್ ಎಫೆಕ್ಟ್ ಇದರ ಸೇವನೆಯಿಂದ ಎದುರಾಗಬಹುದು.

2. ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಇದು ಹಸಿವನ್ನು ಕಡಿಮೆ ಮಾಡುವ ಗುಣಲಕ್ಷಣವನ್ನು ಹೊಂದಿದೆ ಎನ್ನುವುದು ಸ್ಟಡಿ ರಿಪೋರ್ಟ್ ವರದಿ. ಒಂದು ಲೋಟ ನೀರಿಗೆ ಒಂದು ಸ್ಪೂನ್ ಅಗಸೆಬೀಜವನ್ನು ಹಾಕಿ ಬೆಳಗ್ಗೆ ತಿಂಡಿ ತಿನ್ನುವ ವೇಳೆ ಕುಡಿದರೆ ಉತ್ತಮ. ದಿನಕ್ಕೆ ಒಂದು ಚಮಚದಷ್ಟು ಮಾತ್ರ ಅಗಸೆಬೀಜ ತಿನ್ನುಬಹುದು ಎಂದು ಹಲವು ವರದಿಗಳು ಹೇಳಿವೆ.

RELATED ARTICLES
- Advertisment -
Google search engine

Most Popular