Sunday, April 20, 2025
Google search engine

Homeರಾಜ್ಯಆರಗ ಜ್ಞಾನೇಂದ್ರ, ತಂಡದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಅಧ್ಯಯನ

ಆರಗ ಜ್ಞಾನೇಂದ್ರ, ತಂಡದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಅಧ್ಯಯನ

ಶಿವಮೊಗ್ಗ :ರಾಜ್ಯಾದ್ಯಂತ ೬ ತಂಡಗಳಾಗಿ ಪ್ರವಾಹ ಅಧ್ಯಯನ ಆರಂಭಿಸಿದ್ದು ಮಾಜಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರ ತಂಡವು ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ, ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿತು.

ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಹಾದಿಗಲ್ಲಿನಲ್ಲಿ ಮರ ಬಿದ್ದು ಅಸುನೀಗಿದ ಸಚಿನ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ತೀರ್ಥಹಳ್ಳಿ ಭಾಗದ ಹಾದಿಗಲ್ಲು, ಅಂಡುಗದೋದೂರು ಪಂಚಾಯತ್, ಹಾಗೂ ಕೌರಿ ಬೇಳೂರು ಭಾಗ, ಚಕ್ರಾ ಸಾವೇ ಹಕ್ಲು ಪ್ರದೇಶದ ಪರಿವೀಕ್ಷಣೆ ನಡೆಸಲಾಯಿತು.

ಈ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಹರತಾಳ ಹಾಲಪ್ಪ, ಶಾಸಕರಾದ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಶ್ರೀ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular