ಮಂಡ್ಯ: ಕಾವೇರಿ ನದಿಯಲ್ಲಿ ಪ್ರವಾಹ ಹಿನ್ನಲೆ ಶ್ರೀರಂಗಪಟ್ಟಣದ ಪ್ರಮುಖ ಪಿಂಡ ತರ್ಪಣ ಸ್ಥಳಗಳು ಜಲಾವೃತವಾಗಿವೆ.
ಶ್ರೀರಂಗಪಟ್ಟಣದ ಪ್ರಮುಖ ಶ್ರಾದ್ದಕಾರ್ಯದ ಪಶ್ವಿಮ ವಾಹಿನಿ, ಸ್ನಾನಘಟ್ಟ, ಘೋಸಾಯ್ ಘಾಟ್, ಸಂಗಮ ಕೇಂದ್ರಗಳು ಜಲಾವೃತವಾಗಿವೆ. ಜಲಾವೃತದಿಂದಾಗಿ ಪಿಂಡ ತರ್ಪಣ ಬಿಡಲು ಮೃತರ ಸಂಬಂಧಿಕರು ಪರದಾಡುತ್ತಿದ್ದಾರೆ.
ಮೃತರ ಅಸ್ಥಿ ಗೆ ಪೂಜೆ ಸಲ್ಲಿಸಿ ಸೇತುವೆ ಮೇಲಿಂದ ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ.
ಹಲವು ಕಡೆ ಕಾವೇರಿ ನದಿ ತಟದಲ್ಲಿ ಜಿಲ್ಲಾಡಳಿತದಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.