Saturday, April 19, 2025
Google search engine

Homeಸ್ಥಳೀಯತಂತ್ರಜ್ಞಾನದೆಡೆ ಗಮನ ನೀಡಿ ಕಲಿಕೆಯಲ್ಲಿ ಆಸಕ್ತಿ ಹೊಂದಿ: ಶಾಸಕ

ತಂತ್ರಜ್ಞಾನದೆಡೆ ಗಮನ ನೀಡಿ ಕಲಿಕೆಯಲ್ಲಿ ಆಸಕ್ತಿ ಹೊಂದಿ: ಶಾಸಕ

ಗುಂಡ್ಲುಪೇಟೆ: ಬದಲಾದ ಪರಿಸ್ಥಿತಿಯಲ್ಲಿ ಹೊಸ ತಂತ್ರಜ್ಞಾನದ ಕಡೆಗೆ ವಿದ್ಯಾರ್ಥಿಗಳು ಗಮನ ನೀಡಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕೆಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಲಹೆ ನೀಡಿದರು.

ತಾಲೂಕಿನ ಚಿಕ್ಕತುಪ್ಪೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಪೌಂಡೇಶನ್ ವತಿಯಿಂದ ನಡೆದ ಬಾಲಮಿತ್ರ ಗ್ರಾಮಗಳ ಆಯ್ದ ಸರ್ಕಾರಿ ಶಾಲೆಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳ ವಿತರಣಾ ಸಮಾರಂಭದಲ್ಲಿ ವಿವಿಧ ಶಾಲೆಗಳಿಗೆ ಎಲೆಕ್ಟ್ರಾನಿಕ್ ಉಪಕರಣ ನೀಡಿ ಮಾತನಾಡಿದರು.

ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಪೌಂಡೇಶನ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರಿಸ್ಥಿತಿಯನ್ನು ನೋಡಿ ಬದಲಾವಣೆ ತರಬೇಕು ಎಂಬ ಉದ್ಧೇಶದಿಂದ ನಗರ ಭಾಗದ ಪ್ರದೇಶಗಳನ್ನು ಬಿಟ್ಟು ಕಾಡಂಚಿನ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಪೆÇ್ರೀಜೆಕ್ಟರ್ ಮತ್ತು ಲ್ಯಾಪ್‍ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ನೀಡುತ್ತಿದೆ. ಇದನ್ನು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ನಿರೀಕ್ಷೆಯಿಲ್ಲದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯ ಮಾಡುತ್ತಿರುವ ಕೈಲಾಶ್ ಸತ್ಯಾರ್ಥಿ ಸಂಸ್ಥೆಯ ಸೇವೆ ಶ್ಲಾಘನೀಯ. ಪ್ರಪಂಚ ತಂತ್ರಜ್ಞಾನದಲ್ಲಿ ಬಹಳ ಮುಂದೆಯಿದ್ದು ಈ ಹಿಂದೆ ಯಾವುದೇ ವಸ್ತುಗಳು ಬಿಡುಗಡೆಯಾದರೆ ಅದು ಪಟ್ಟಣದ ಪ್ರದೇಶದ ಜನರಿಗೆ ಪರಿಚಯವಾಗಲು 5-6 ವರ್ಷಗಳು ಬೇಕಾಕುತ್ತಿತ್ತು. ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಹೊಸ ತಂತ್ರಜ್ಞಾನಗಳ ಮಾರುಕಟ್ಟೆಗೆ ಬಂದಿದ್ದು, ಕ್ಷಣಮಾತ್ರದಲ್ಲಿ ಸಾರ್ವಜನಿಕ ಬಳಕೆಗೆ ಸಿಗುತ್ತಿದೆ. ಅಷ್ಟರ ಮಟ್ಟಿಗೆ ನಾವು ತಂತ್ರಜ್ಞಾನ ಬಳಕೆಯಲ್ಲಿ ಮುಂದಿದ್ದೇವೆ ಎಂದು ತಿಳಿಸಿದರು.

ಸಂಘ-ಸಂಸ್ಥೆ ಮತ್ತು ಟ್ರಸ್ಟ್ ಸ್ಥಾಪನೆ ಮಾಡುವುದು ಸುಲಭ. ಆದರೆ ಅದನ್ನು ನಿರ್ವಹಣೆ ಮಾಡಿಕೊಂಡು ಹೋಗುವುದು ಬಹಳ ಕಷ್ಟ ಹಾಗಾಗಿ ಟ್ರಸ್ಟ್ ಉತ್ತಮವಾಗಿ ಕೆಲಸ ಮಾಡಿದರೆ ದಾನಿಗಳು ಸಹ ನಮ್ಮ ಸೇವೆಯನ್ನು ಅರಿತು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುತ್ತಾರೆ ಎಂದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ ಮಾತನಾಡಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ  ಹೆಚ್ಚಿನ ಒತ್ತು ನೀಡಬೇಕು ಎಂಬ ಉದ್ಧೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಮೂಲಕ ಮಕ್ಕಳು ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಜೊತೆಗೆ ಪೆÇೀಷಕರು ಸಹ ಮಕ್ಕಳ ಓದಿಗೆ ಉತ್ತೇಜನ ನೀಡಬೇಕು. ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಸಮುದಾಯ ಹಾಗೂ ಶಿಕ್ಷಕರು ನೋಡಿಕೊಳ್ಳಬೇಕು. ಇದರಿಂದ ಮಾತ್ರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.ಕೈಲಾಶ್ ಸತ್ಯಾರ್ಥಿ ಸಂಸ್ಥೆಯ ಜಿಲ್ಲಾ ಸಂಯೋಜಕ ನಾರಾಯಣಸ್ವಾಮಿ ಮಾತನಾಡಿ, ಸಂಸ್ಥೆಯ ಬೆಳೆದು ಬಂದ ಹಾದಿಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ಚಿಕ್ಕತುಪ್ಪೂರು, ಬೊಮ್ಮಲಾಪುರದ ಗೌತಮ ಪ್ರೌಢಶಾಲೆ, ಮಲ್ಲಯ್ಯನಪುರ ಶಾಲೆ, ಬೇರಂಬಾಡಿ ಶಾಲೆ ಸೇರಿದಂತೆ 20 ಶಾಲೆಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಬನ್ನಿತಾಳಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಯಿಮಣಿ, ಸಿಡಿಪಿಓ ಹೇಮಾವತಿ, ಮುಖ್ಯ ಶಿಕ್ಷಕ ಮಹೇಶ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ, ಕೈಲಾಶ್ ಸತ್ಯಾರ್ಥಿ ಸಂಸ್ಥೆಯ ಕಾಳಿಂಗಸ್ವಾಮಿ ಸಿದ್ಧಾರ್ಥ್, ಮಹೇಶ್, ಹಂಗಳ ಪವಿತ್ರ, ಭಾಗ್ಯ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular