Wednesday, January 14, 2026
Google search engine

Homeರಾಜಕೀಯಡಿಕೆಶಿ ಬೆನ್ನಲ್ಲೇ ಇದೀಗ ಡಿಕೆ ಸುರೇಶ್‌ ಮಾರ್ಮಿಕ ಪೋಸ್ಟ್..!

ಡಿಕೆಶಿ ಬೆನ್ನಲ್ಲೇ ಇದೀಗ ಡಿಕೆ ಸುರೇಶ್‌ ಮಾರ್ಮಿಕ ಪೋಸ್ಟ್..!

ಬೆಂಗಳೂರು : ಮತ್ತೆ ರಾಜ್ಯ ಕಾಂಗ್ರೆಸ್​ನಲ್ಲಿ ಪವರ್​ ಶೇರಿಂಗ್​ ಚರ್ಚೆ ಗರಿಗೆದರಿದ್ದು, ಡಿಕೆ ಶಿವಕುಮಾರ್​ ಅವರನ್ನ ಸಿಎಂ ಸ್ಥಾನದಲ್ಲಿ ನೋಡ್ಬೇಕು ಅನ್ನೋದು ಸಹೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರ ಬಹುದೊಡ್ಡ ಕನಸಾಗಿದೆ. ಇದೇ ಪ್ರಯತ್ನದಲ್ಲಿದ್ದಾರೆ ಡಿಕೆ ಬ್ರದರ್ಸ್​ ಇದ್ದು, ರಾಜ್ಯಕ್ಕೆ ರಾಹುಲ್ ಗಾಂಧಿ​ ಬಂದು ಹೋದ ಮೇಲೆ ಡಿಕೆ ಸಹೋದರರಿಗೆ ಬಲ ಬಂದಂತಾಗಿದ್ಯಾ ಎಂಬ ಪ್ರಶ್ನೆ ಮೂಡಿಸಿದೆ.

ಈ ಹಿನ್ನಲೆ ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕ್ ಪೋಸ್ಟ್​​ ಬಳಿಕ ಡಿಕೆ ಸುರೇಶ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಶೇರ್ ಮಾಡುವ ಮೂಲಕ ಹೊಸದೊಂದು ಹಿಂಟ್​ ಕೊಟ್ಟಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್​ ಬೆನ್ನಲ್ಲೇ ಮಾಜಿ ಸಂಸದ ಡಿಕೆ ಸುರೇಶ್​ ಮಾರ್ಮಿಕ ಪೋಸ್ಟ್ ಶೇರ್ ಮಾಡಿದ್ದು, ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ, ಸತತ ಪ್ರಯತ್ನದ ಫಲವೇ ಯಶಸ್ಸು ಎಂದು ಬರೆದು ಡಿಕೆ ಸುರೇಶ್ ಪೋಸ್ಟ್​ ಮಾಡಿದ್ದು ಹೊಸ ಚರ್ಚೆಗೆ ಕಾರಣವಾಗಿದೆ.

ಈ ಮೊದಲು ಡಿಕೆ ಶಿವಕುಮಾರ್‌ ಅವರು ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಪೋಸ್ಟ್ ಮಾಡಿದ್ದರೂ ಈ ಬೆನ್ನಲ್ಲೇ ಡಿಕೆ ಸುರೇಶ್ ಪೋಸ್ಟ್ ಮಾಡಿದ್ದು ಅಣ್ಣ-ತಮ್ಮನ ಈ ಪೋಸ್ಟ್ ಭಾರೀ ಕುತೂಹಲ ಮೂಡಿಸಿದೆ. ನಾಯಕತ್ವದ ಬದಲಾವಣೆ ಚರ್ಚೆ ಜೋರಾಗಿರುವ ಸಮಯದಲ್ಲೇ ಡಿಕೆ ಬ್ರದರ್​ ಪೋಸ್ಟ್​ ಕಿಚ್ಚು ಹೆಚ್ಚಿಸುವಂತಿದೆ ಎನ್ನಲಾಗುತ್ತಿದೆ.

ರಾಹುಲ್ ಗಾಂಧಿ ಭೇಟಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮನದಲ್ಲಿ ಮತ್ತೆ ಸಿಎಂ ಕುರ್ಚಿ ಆಸೆ ಚಿಗುರಿದಂತೆ ಕಾಣ್ತಿದ್ದು, ಅದಕ್ಕೆ ಈ ಪೋಸ್ಟ್ ಸಾಕ್ಷಿ ಎಂಬಂತಿದೆ. ಸಿಎಂ ಕುರ್ಚಿಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಗುಡಿ-ಗೋಪುರ ಸುತ್ತಿ ಪ್ರಾರ್ಥನೆ ಸಲ್ಲಿಸಿದ್ದು, ಈ ಪ್ರಾರ್ಥನೆ ಶೀಘ್ರವೇ ಫಲಿಸುತ್ತಾ ಎನ್ನುವ ಪ್ರಶ್ನೆ ಮೂಡಿದೆ. ರಾಹುಲ್​ ಗಾಂಧಿ ಮೈಸೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಅವರನ್ನ ಪಕ್ಕಕ್ಕೆ ಕರೆದು ಪ್ರತ್ಯೇಕವಾಗಿ ಕೆಲ ನಿಮಿಷಗಳ ಮಾತಾಡಿದ್ದಾರೆ ಎನ್ನಲಾಗ್ತಿದ್ದು, ಶೀಘ್ರವೇ ದೆಹಲಿಗೆ ಡಿಸಿಎಂ ಕರೆಸಿ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular