Friday, April 4, 2025
Google search engine

Homeರಾಜ್ಯಸುದ್ದಿಜಾಲಭಾಷೆಗೆ ಭೀಮ ಬಲ ಬರಬೇಕಾದರೆ ಭಾವನಾತ್ಮಕವಾಗಿ ಅಭಿಮಾನವಿರಲಿ: ಜಂಗಮ‌ ಮಠದ ಶ್ರೀ ನಟರಾಜಸ್ವಾಮಿ ಅಭಿಪ್ರಾಯ

ಭಾಷೆಗೆ ಭೀಮ ಬಲ ಬರಬೇಕಾದರೆ ಭಾವನಾತ್ಮಕವಾಗಿ ಅಭಿಮಾನವಿರಲಿ: ಜಂಗಮ‌ ಮಠದ ಶ್ರೀ ನಟರಾಜಸ್ವಾಮಿ ಅಭಿಪ್ರಾಯ

ಹುಣಸೂರು: ಕನ್ನಡ ಭಾಷೆ ನಾಡಿನಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಭಾವನಾತ್ಮಕವಾಗಿ ಅಭಿಮಾನವಿರಬೇಕು ಆಗಮಾತ್ರ ಭಾಷೆಗೆ ಭೀಮ ಬಲ ಬರಲಿದೆ ಎಂದು ಗಾವಡಗೆರೆ ಜಂಗಮ‌ ಮಠದ ಶ್ರೀ ನಟರಾಜಸ್ವಾಮಿ ಅಭಿಪ್ರಾಯ ಪಟ್ಟರು.

ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಶಿಕ್ಷಕರಿಗೆ ಸನ್ಮಾನದಲ್ಲಿ ಮಾತನಾಡಿದ ಅವರು, ಪ್ರತಿಕ್ಷಣ ಭಾವನೆಗಳ ಜತೆ ನೈಜತೆಯನ್ನು ಬಿತ್ತುವ ಏಕೈಕ ಭಾಷೆ ಕನ್ನಡವಾಗಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ಕಸಾಪ, ರೋಟರಿ ಸಂಸ್ಥೆ ಹಾಗೂ ಇನ್ನತರೆ ಸಂಘಗಳು ಸಹಕಾರಿಯಾಗಿವೆ ಆ ನಿಟ್ಟಿನಲ್ಲಿ ಹದಿನಾರನೇ ಶತಮಾನದಲ್ಲೇ ಕನ್ನಡ ಭಾಷೆ, ನಾಡು ನುಡಿ, ನೆಲಜಲದ ಬಗ್ಗೆ ಶರಣರು ಬೆಳಕು ಚಲ್ಲಿದ್ದರು ಎಂದರು.

ಮಾದಹಳ್ಳಿ ಶ್ರೀ ಸಾಂಬಸದಾಶಿವ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ.ಗರು, ಹಿರಿಯರ ಬಗ್ಗೆ ಗೌರವ ಬೆಳಸಿಕೊಂಡರೆ. ತಾವು ಅಂದುಕೊಂತೆ ಗುರಿ ತಲುಪಲು ಸಾಧ್ಯವಿದೆ. ಹಾಗೆ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೆ ಪುರಸ್ಕಾರ ಭಾಜನರಾಗಿರುವುದು ಸಂತಸವೆಂದರು.

ತಾಲೂಕು ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಮಾತನಾಡಿ, ಹಿಂದೆ ಕನ್ನಡ ಭಾಷೆ, ನೆಲ, ಜಲವೆಂದರೆ ಸಂಘಟನೆಗಳು ಹೋರಾಟಮಾಡಿ ಭಾಷೆಯ ಅಭಿಮಾನವನ್ನು ಹೆಚ್ಚಿಸಿದ್ದವು. ಆದರೆ ಅದು ಈಗ ಸ್ವಲ್ಪ ಕಣ್ಮರೆಯಾಗಿದೆ. ಮುಂದೆಯೂ ನಮ್ಮ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಮನೆ, ಮನಗಳಲ್ಲಿ ಅರಳಬೇಕು ಎಂದರು.

ರೋಟರಿ ಅಧ್ಯಕ್ಷ ಪ್ರಸನ್ನ ಕೆ.ಪಿ. ಮಾತನಾಡಿ, ನ್ನಡ ಭಾಷೆ ಐತಿಹಾಸಿಕ ಭಾಷಿಯಾಗಿದ್ದು, ಅಂದು ಗ್ರಾಮೀಣ ಭಾಗದಲ್ಲಿ ಹೆಚ್ಚು ಮನೆಮಾತಾಗಿತ್ತು. ಆದರೆ ಈಗ ಅಂಧ ಅಭಿಮಾನದಿಂದ ಕನ್ನಡ ಭಾಷೆಯನ್ನು ಬೆಳಸುತ್ತಿದ್ದೇವೆ ಹೊರತು ಕನ್ನಡ ಬಳಸುತ್ತಿಲ್ಲ. ಎಂದು ವಿಷಾದ ವ್ಯಕ್ತಪಡಿಸಿದರು.

ತಾಲೂಕು ಕಸಾಪ Sheldon ಹೆಚ್.ಕೆ.ಮಹದೇವ ಮಾತನಾಡಿ, ಅಧಿಕಾರವಹಿಸಿಕೊಂಡ ಎರ ವರುಷ ಆರು ತಿಂಗಳಲ್ಲಿ. ಪಧಾದಿಕಾರಿಗಳ ಸಹಕಾರದಿಂದ ಕನ್ನಡ ಕಟ್ಟುವ ಕೆಲಸದ ಜತೆಗೆ ತಾಲೂಕಿನ ಸಾಧಕ ಮಕ್ಕಳು, ಅವರಿಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ, ಪ್ರಾಂಶುಪಾಲರಿಗೆ ಪುರಸ್ಕಾರ ನೀಡಲು ಸಾಧ್ಯವಾಗಿದೆ ಪುಳಕಗೊಂಡರು.

ರೋಟರಿ ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್, ರಾ.ಕ.ಫ್ರೌ.ಶಾ.ಮು.ಅಧ್ಯಕ್ಷ ಮಹದೇವಯ್ಯ ಪಿ., ಕ.ಸಾ.ಪ.ಹು ಅಧ್ಯಕ್ಷ ಎಸ್.ಗೋವಿಂದೇಗೌಡ, ಮೋಹನ್ ರಾಜ್, ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್ ಆಶಯ ನುಡಿಗಳನ್ನಾಡಿದರು ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ರಂಗಸ್ವಾಮಿ ಕಸಾಪ ಕಾರ್ಯದರ್ಶಿ ಲೋಕೇಶ್, ಕೆ.ನಂಜುಂಡಸ್ವಾಮಿ, ರೋಟರಿ ಸದಸ್ಯರಾದ, ಡಾ.ಪ್ರಸನ್ನ, ಆರ್.ಆನಂದ್, ಧರ್ಮಾಪುರ ನಾರಾಯಣ್, ಜಿ.ವಿ‌.ಶ್ರೀ ನಾಥ್, ಸಿ.ಎಸ್.ಮಹೇಶ್, ಕುಮಾರ್ ಅರಸೇಗೌಡ, ನಘರಾಜ್, ವಾಸುಕಿ, ತ್ರೀನೇಶ್, ಇದ್ದರು.

RELATED ARTICLES
- Advertisment -
Google search engine

Most Popular