ರಾಮನಗರ: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ಉಳಿಕೆ, ಮೂಲ ವೃಂದದ ವಾಣಿಜ್ಯತೆರಿಗೆ ಪರಿವೀಕ್ಷಕರು ೨೩೦ ಹುದ್ದೆಗಳಿಗೆ ಜ. ೨೦ ಮತ್ತು ೨೧ ರಂದುಕನ್ನಡ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲುಜಿಲ್ಲೆಯಲ್ಲಿಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದುಜಿಲ್ಲಾಧಿಕಾರಿಡಾ.ಅವಿನಾಶ್ ಮೆನನ್‌ರಾಜೇಂದ್ರನ್‌ಅವರುತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಖಜಾನಾಧೀಕಾರಿಗಳು, ಪರೀಕ್ಷಾಕೇಂದ್ರದ ಮುಖ್ಯಸ್ಥರುಗಳು ಮತ್ತುಇತರೆ ಅಧಿಕಾರಿಗಳನ್ನು ಒಳಗೊಂಡಂತೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಗಳಿಗೆ ಸಭೆಯನ್ನು ನಡೆಸಿ ಸೂಚನೆಗಳನ್ನು ನೀಡಲಾಗಿದೆ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ:ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪರೀಕ್ಷೆ ಪ್ರಾರಂಭವಾಗುವ ೦೨ಗಂಟೆ ಮುಂಚಿತವಾಗಿ ಪರೀಕ್ಷಾಕೇಂದ್ರದ ಬಳಿ ಹಾಜರಾಗತಕ್ಕದ್ದು ಹಾಗೂ ಅಭ್ಯರ್ಥಿಗಳು ಪರೀಕ್ಷಾಕೇಂದ್ರದ ಸುತ್ತಕಿವಿಯಲ್ಲಿಯಾವುದೇಎಲೆಕ್ಟ್ರಾನಿಕ್‌ಡಿವೈಸ್ ಮತ್ತು ಮೈಕ್ರೋ ಫೋನ್‌ಬಳಸುವಂತಿಲ್ಲ, ಇವುಗಳನ್ನು ಬಳಸುವುದು ಕಡ್ಡಾಯವಾಗಿ ನಿಷೇದಿಸಿದೆ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಲಾಗಿರುವಇನ್ನಿತರೆ ಸೂಚನೆಗಳನ್ನು ಪಾಲಿಸತಕ್ಕದ್ದು.
ಜ. ೨೦ರ ಶನಿವಾರ ನಡೆಯುವ ಪರೀಕ್ಷಾಕೇಂದ್ರದ ಹೆಸರು ಮತ್ತು ವಿಳಾಸ:ಪರೀಕ್ಷೆಯನ್ನುಸರ್ಕಾರಿ ಪ್ರಥಮದರ್ಜೆಕಾಲೇಜುಚನ್ನಪಟ್ಟಣ,ಸರ್ಕಾರಿ ಪ್ರೌಢಶಾಲೆಐಜೂರು, ರಾಮನಗರ, ಶಾಂತಿನಿಕೇತನ ಪಾಲಿಟೆಕ್ನಿಕ್‌ಕಾಲೇಜುರಾಮನಗರ, ಶಾಂತಿನಿಕೇತನ ಪ್ರಥಮದರ್ಜೆಕಾಲೇಜು, ರಾಮನಗರ ಹಾಗೂ ಶಾಂತಿನಿಕೇತನ ಪ್ರೌಢಶಾಲೆ, ರಾಮನಗರ.
ಜ. ೨೧ರ ಭಾನುವಾರ ನಡೆಯುವ ಪರೀಕ್ಷಾಕೇಂದ್ರದ ಹೆಸರು ಮತ್ತು ವಿಳಾಸ:ಪರೀಕ್ಷೆಯನ್ನುಸರ್ಕಾರಿ ಪ್ರಥಮದರ್ಜೆಕಾಲೇಜುಚನ್ನಪಟ್ಟಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠ,ರಾಮನಗರ, ಸರ್ಕಾರಿ ಪ್ರೌಢಶಾಲೆಐಜೂರು, ರಾಮನಗರ, ಶಾಂತಿನಿಕೇತನ ಪಾಲಿಟೆಕ್ನಿಕ್‌ಕಾಲೇಜುರಾಮನಗರ, ಬಾಲಕಿಯರ.ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ರಾಮನಗರ, ಬಾಲಕರ,ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ರಾಮನಗರಇಲ್ಲಿ ನಡೆಸಲಾಗುವುದುಎಂದುತಿಳಿಸಿದ್ದಾರೆ.