ಹುಣಸೂರು: ತಾಂತ್ರಿಕ ಅಧಿಕಾರಿಗಳ ಹುದ್ದೆಗಳಿಗೆ ನೀಡುವ ಶ್ರೇಣಿ ವೇತನ ನೀಡದೆ ತಾರತಮ್ಯ ಅನುಸರಿಸುತ್ತಿರುವ ಸರಕಾರದ ವಿರುದ್ದ ಅನಿರ್ಧಿಷ್ಟ ಅವಧಿ ಮುಷ್ಕರ ನಡೆಸಲಾಗುವುದು ಎಂದು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಅಧ್ಯಕ್ಷ ನಾಗೇಶ್ ಮನವಿ ಮಾಡಿದ್ದಾರೆ.
ತಾಲೂಕು ಉಪ ತಹಶಿಲ್ದಾರ್ ಶ್ರೀ ಪಾದ್ ನಾಲತಡ್ಕರ್ ಅವರಿಗೆ, ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ನಡೆಯುವ ಎಲ್ಲಾ ತಾಂತ್ರಾಂಶವನ್ನು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಗ್ರಾಮ ಲೆಕ್ಕ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡು ವ ಶ್ರೇಣಿ ವೇತನ ನೀಡುವಂತೆ ಒತ್ತಾಯಿಸಿದ್ದಾರೆ.
ಹೋಬಳಿ ಮಟ್ಟದಲ್ಲಿ ದಶಕಗಳಿಂದ ಗ್ರಾಮಲೆಕ್ಕಾಧಿಗಳ ಕಛೇರಿಗಳಿಗೆ ಸುಸಜ್ಜಿತವಾದ ಕಟ್ಟಡ ಗುಣಮಟ್ಟದ ಟೇಬಲ್, ಕುರ್ಚಿ, ಇನ್ನಿತರೆ ಮೂಲ ಸೌಕರ್ಯಗಳ ಕಲ್ಪಿಸುವ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು.
ವೇದಿಕೆಯಲ್ಲಿ ಗ್ರಾಮಲೆಕ್ಕಾಧಿಗಳಾದ,ಉಪಾಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಶ್ರೀವತ್ಸ, ಗ್ರಾಮ ಅಧಿಕಾರಿಗಳಾದ ಮಹದೇವ್,ತೀರ್ಥಗಿರಿಗೌಡ, ವಿಶಾಲ್, ಮಧು, ಚೈತ್ರ, ವಿಜಯ್ ಕುಮಾರ್, ಸುಮಂತ್, ಶಿವಕುಮಾರ್, ಸಿದ್ದು, ಪಲ್ಲವಿ , ಮಲ್ಲೇಶ್ ಇದ್ದರು.