Tuesday, April 8, 2025
Google search engine

Homeರಾಜ್ಯಸುದ್ದಿಜಾಲಹನೂರು ಹೆದ್ದಾರಿಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ  ಬೈಕ್ ಸವಾರರು

ಹನೂರು ಹೆದ್ದಾರಿಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ  ಬೈಕ್ ಸವಾರರು

ಹನೂರು: ಕನಾಟಕ –ತಮಿಳುನಾಡು ಗಡಿಭಾಗದ ಗರಿಕೆಕಂಡಿ ಚೆಕ್‌ಪೋಸ್ಟ್ ಬಳಿ ಕಾಡಾನೆ ದಾಳಿ ನಡೆಸಿದ್ದು, ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಶುಕ್ರವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಜರುಗಿದೆ.

ಹೆದ್ದಾರಿಯ ಗರಿಕೆಕಂಡಿ ಚೆಕ್‌ಪೋಸ್ಟ್ ಬಳಿ ಇಬ್ಬರು ಸವಾರರು ಆಗಮಿಸುತ್ತಿದ್ದಂತೆ ರಸ್ತೆಬದಿಯಲಿದ್ದ ಆನೆಯು ದಾಳಿಗೆ ಮುಂದಾಗಿದೆ. ಕೂಡಲೇ ಎಚ್ಚೆತ್ತ ಸವಾರರು ಬೈಕನ್ನು ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ಮತ್ತಷ್ಟು ಕುಪಿತವಾದ ಆನೆಯು ತನ್ನ ಸೊಂಡಿಲಿನಿಂದ ಬೈಕನ್ನು ತಳ್ಳಿ-ತಳ್ಳಿ ಜಖಂಗೊಳಿಸಿದೆ. ಅದೃಷ್ಟವಶಾತ್ ಸವಾರರಿಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ಈ ವೇಳೆ ಸಮೀಪದಲ್ಲಿದ್ದ ಕೆಲ ವಾಹನ ಸವಾರರು, ಸ್ಥಳೀಯ ಅರಣ್ಯ ಇಲಾಖೆ ಸಿಬಂದಿ ಜೋರಾಗಿ ಕೂಗಾಡಿ ಆನೆಯನ್ನು ಅರಣ್ಯದೊಳಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಆನೆಯು ಸೊಂಡಿಲಿನಿಂದ ಬೈಕನ್ನು ಜಖಂಗೊಳಿಸುತ್ತಿರುವುದನ್ನು ಕೆಲ ಪ್ರತ್ಯಕ್ಷದರ್ಶಿಗಳು ಮೊಬೈಲ್‌ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ವೈರಲ್ ಆಗುತ್ತಿದೆ.

RELATED ARTICLES
- Advertisment -
Google search engine

Most Popular