ಮೈಸೂರು : ಮಹಾರಾಷ್ಟ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ ಮಾಹಿತಿ ಮೇರೆಗೆ ರಾಮಕೃಷ್ಣನಗರದ ಐ ಬ್ಲಾಕ್ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ಆನೆ ದಂತಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮೈಸೂರು ವಲಯದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ನೋಡಲಾಗಿ 3 ಆನೆ ದಂತದ ತುಂಡುಗಳು ಇರುವುದು ಕಂಡುಬಂದಿದೆ.
ಸದರಿ ಆನೆ ದಂತದ ತುಂಡುಗಳನ್ನು ಇಲಾಖಾ ಪರ ವಶಪಡಿಸಿಕೊಂಡು ಸ್ಥಳದಲ್ಲಿದ್ದ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಬಂಧಿಸಿದ್ದಾರೆ. ಸದರಿ ಆರೋಪಿಗಳ ವಿರುದ್ಧ WLOR 01/2026-27 ಮೇ27 ಅನ್ನು ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದು, ಸದರಿ ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯು ಕೊಳ್ಳೆಗಾಲದಲ್ಲಿರುವ ಬಗ್ಗೆ ಮಾಹಿತಿಯು ತಿಳಿದುಬಂದ ಮೇರೆಗೆ ಕೊಳ್ಳೆಗಾಲಕ್ಕೆ ಹೋಗಿ ಸದರಿ ಆರೋಪಿಯನ್ನು ಬಂಧಿಸಿ ಕರೆತರಲಾಗಿರುತ್ತದೆ. ಒಟ್ಟು 4 ಜನ ಆರೋಪಿಗಳನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆಯನ್ನು ಮುಂದುವರೆಸಲಾಗಿದೆ.
ಸದರಿ ಕಾರ್ಯಾಚರಣೆಯನ್ನು ಮೈಸೂರು ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿನೀತ ಮಾರ್ಗದರ್ಶನದಲ್ಲಿ ಮೈಸೂರು ಪ್ರಾದೇಶಿಕ ವಲಯ ವಲಯ ಅರಣ್ಯಾಧಿಕಾರಿ ಮುಹಮ್ಮದ್ ಜೀಷಾನ್, ಉಪ ವಲಯ ಅರಣ್ಯಾಧಿಕಾರಿ ಕನಿಕ, ಉಪ ವಲಯ ಅರಣ್ಯಾಧಿಕಾರಿ ಜಿ.ವಿ.ಮಹೇಶ್, ಉಪ ವಲಯ ಅರಣ್ಯಾಧಿಕಾರಿ ಬಿ.ಎ.ಸತೀಶ್, ಉಪ ವಲಯ ಅರಣ್ಯಾಧಿಕಾರಿ ಸಿ.ಸಚಿನ್, ಉಪ ವಲಯ ಅರಣ್ಯಾಧಿಕಾರಿ ಸಂಜೀವ ಕೆ.ಪಾಟೀಲ, ಗಸ್ತು ಅರಣ್ಯ ಪಾಲಕರಾದ ನಾಗರಾಜ ಎಸ್.ಲಮಾಣಿ, ಸಂತೋಷ್ ನಾಯಕ್, ವಿನಾಯಕ ಎಸ್.ಶಂಖವಾಸಿ, ವಿರೂಪಾಕ್ಷ, ಅರಣ್ಯ ವೀಕ್ಷಕರಾದ ಲಕ್ಷ್ಮಿಪಾಟೀಲ್, ಸುನಂದ ಶಿವಪ್ಪ ನಿಗಧಿ ಹಾಗೂ ವಾಹನ ಚಾಲಕರಾದ ಗಣೇಶ್, ಮಂಜುನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



