Sunday, April 20, 2025
Google search engine

Homeಸ್ಥಳೀಯಪುಂಡಾನೆಯನ್ನು ಸೆರೆಹಿಡಿದ ಅರಣ್ಯ ಇಲಾಖೆ

ಪುಂಡಾನೆಯನ್ನು ಸೆರೆಹಿಡಿದ ಅರಣ್ಯ ಇಲಾಖೆ

ಹನೂರು : ತಾಲೂಕಿನ ಮಲೆಮಹದೇಶ್ವರ ಕಾಡಿನ ವ್ಯಾಪ್ತಿಯಲ್ಲಿ ೩-೪ ತಿಂಗಳಿಂದ ಉಪಟಳ ನೀಡುತ್ತಿದ್ದ ಆನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಗೇರಟ್ಟಿ ಗ್ರಾಮ ಸಮೀಪದ ಕತ್ರಿಆಪ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ಆನೆ ಸಾಕಾನೆಗಳ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಿದ ಇಲಾಖೆ ಆನೆಯನ್ನು ಸೆರೆ ಹಿಡಿಯವಲ್ಲಿ ಯಶಸ್ವಿಯಾಗಿದೆ. ಪುಂಡಾನೆಯಿಂದ ನಿದ್ದೆಗೆಡುವಂತಾಗಿದ್ದ ಈ ಭಾಗದ ಜನರು ಈಗ ನಿಟ್ಟುಸಿರು ಬಿಡುವಂತಾಗಿದೆ.
೫ ಸಾಕಾನೆ ೧೦೦ಕ್ಕೂ ಹೆಚ್ಚು ಸಿಬ್ಬಂದಿ ಮತ್ತಿಗೋಡು, ತಿತಿಮತಿ, ಕುಶಾಲನಗರದ ದುಖಾರೆ ಹಾಗೂ ಬಳ್ಳಿ ಶಿಬಿರದ ಅರ್ಜುನ, ಅಶ್ವತ್ಥಾಮ, ಕರ್ಣ, ಭೀಮ ಸೇರಿದಂತೆ ಒಟ್ಟು ೬ ಸಾಕಾನೆ ನೆರವಿನೊಂದಿಗೆ ಗೆರಟ್ಟೆ ಭಾಗದ ಅರಣ್ಯ ಪ್ರದೇಶದಲ್ಲಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿ ಅರಣ್ಯ ಅಧಿಕಾರಿಗಳ ತಂಡ ಸೇರಿದಂತೆ ೧೦೦ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿ ಡಾ.ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

RELATED ARTICLES
- Advertisment -
Google search engine

Most Popular