Wednesday, August 6, 2025
Google search engine

Homeರಾಜ್ಯಮಾವುತರು, ದಸರಾ ಗಜಪಡೆಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ನೀಡಿದ ಅರಣ್ಯ...

ಮಾವುತರು, ದಸರಾ ಗಜಪಡೆಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ನೀಡಿದ ಅರಣ್ಯ ಇಲಾಖೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಈಗಾಗಲೇ ದಸರಾ ಜಂಬೂ ಸವಾರಿಗೆ ಸಜ್ಜಾಗಿದೆ. ನಾಡಹಬ್ಬದ ಭಾಗವಾಗಿ ಮೈಸೂರಿಗೆ ಆಗಮಿಸಿರುವ ಗಜಪಡೆ ಇದೀಗ ವಿಶ್ರಾಂತಿ ಮೂಡ್‌ನಲ್ಲಿ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡದ 9 ಆನೆಗಳು ಈಗಾಗಲೇ ಮೈಸೂರಿಗೆ ಆಗಮಿಸಿವೆ. ಈ ಆನೆಗಳಿಗೆ ರಕ್ತಪರಿಶೀಲನೆ ನಡೆಸಲಾಗಿದ್ದು, ಎಲ್ಲವೂ ಆರೋಗ್ಯಕರವಾಗಿವೆ.

ಗಜಪಡೆ ಮೈಸೂರಿನಲ್ಲಿ ತಂಗಿರುವ ಅವಧಿಗೆ ಅರಣ್ಯ ಇಲಾಖೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ಒದಗಿಸಿದೆ. ಈ ವಿಮಾ ಯೋಜನೆ ಆನೆಗಳು, ಮಾವುತರು, ಕಾವಾಡಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ಎಲ್ಲ ಒಳಗೊಂಡಂತೆ ಸಿದ್ಧಪಡಿಸಲಾಗಿದೆ. ಆಗಸ್ಟ್​ 4ರಿಂದ ಅಕ್ಟೋಬರ್​​ 5ರವರೆಗೆ ಈ ಸುರಕ್ಷತೆ ಚಾಲ್ತಿಯಲ್ಲಿರಲಿದೆ. ಟೆಂಡರ್‌ ಮೂಲಕ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್​ ಕಂಪನಿ ಲಿಮಿಟೆಡ್ ವಿಮೆ ಸೌಲಭ್ಯ ಮಾಡಿಸಲಾಗಿದೆ.

ದಸರಾ ಗಜಪಡೆಯ 14 ಆನೆಗಳ ಪೈಕಿ 10 ಗಂಡಾನೆಗಳು ಹಾಗೂ 4 ಹೆಣ್ಣಾನೆಗಳಿವೆ. ಗಂಡಾನೆಗಳಿಗೆ ತಲಾ ₹5 ಲಕ್ಷ ಮತ್ತು ಹೆಣ್ಣಾನೆಗಳಿಗೆ ₹4.5 ಲಕ್ಷ ಮೊತ್ತದ ವಿಮೆ ಮಾಡಲಾಗಿದೆ. ಒಟ್ಟು ₹68 ಲಕ್ಷ ಮೌಲ್ಯದ ವಿಮೆ ಈ ಆನೆಗಳಿಗೆ ನೀಡಲಾಗಿದೆ. ಜೊತೆಗೆ, 43 ಸಿಬ್ಬಂದಿಗೆ ತಲಾ ₹2 ಲಕ್ಷದಂತೆ ₹86 ಲಕ್ಷ ಮೊತ್ತದ ವಿಮೆ ಸೌಲಭ್ಯ ಸಿದ್ದವಾಗಿದೆ.

ಸಾರ್ವಜನಿಕ ಆಸ್ತಿ ಅಥವಾ ಜನರ ಮೇಲೆ ಹಾನಿಯಾದರೆ ಪರಿಹಾರಕ್ಕೆ ₹50 ಲಕ್ಷ ವಿಮೆ ಮಾಡಲಾಗಿದೆ. ಈ ಬೃಹತ್ ವಿಮಾ ಯೋಜನೆಗೆ ಅರಣ್ಯ ಇಲಾಖೆ ₹67,000 ಪ್ರೀಮಿಯಂ ಪಾವತಿಸಿದೆ. ಆಗಸ್ಟ್ 10ರಂದು ಗಜಪಡೆ ಮೈಸೂರು ಅರಮನೆಗೆ ಸಂಭ್ರಮದ ಸ್ವಾಗತವನ್ನು ಪಡೆಯಲಿದ್ದಾರೆ.

RELATED ARTICLES
- Advertisment -
Google search engine

Most Popular