ಹನೂರು:ಕಾಡಾನೆ ದಾಳಿಯಿಂದ ಕಾಡಂಚಿನ ಗ್ರಾಮಗಳಲ್ಲಿ ಜನರು ತತ್ತರಿಸಿ ಹೋಗುತ್ತಿ ದ್ದಾರೆ. ಪ್ರತಿದಿನ ಜಮೀನುಗಳಿಗೆ ಲಗ್ಗೆ ಇಡುವ ಕಾಡಾನೆಗಳಿಂದ ಪೊನ್ನಾಚಿ ಗ್ರಾಮದ ಭಾಗದಲ್ಲಿ ಜನರು ನಿದ್ದೆಗೆಡುತ್ತಿದ್ದಾರೆ.
ಪೊನ್ನಾಚಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ದಿನ ನಿತ್ಯ ಕಾಡಾನೆ ಮನೆಗಳ ಸಮೀಪವೆ ಲಗ್ಗೆ ಇಡುತ್ತಿದ್ದು ರೈತರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಮರ, ಮಾವಿನ ಮರಗಳು ಸೇರಿದಂತೆ ಜೋಳ, ಕಬ್ಬು, ಈ ಹಿಂದೆ ತೆಂಗಿನ ಬೆಳೆಗಳನ್ನು ನಾಶ ಮಾಡುತ್ತಿದ್ದುದ್ದಲ್ಲದೇ ಇದೀಗ ಗೇರಟ್ಟಿ ಗ್ರಾಮದ ರೈತ ರಾಜೇಂದ್ರ ಎಂಬುವವರ ಜಮೀನಿಗೆ ಭಾನುವಾರ ರಾತ್ರಿ ದಾಳಿ ಮಾಡಿ ಬಾಳೆ ಬೆಳೆಯನ್ನು ನಾಶ ಮಾಡಿದೆ. ಅಲ್ಲದೇ ಸೋಲಾರ್ ಫೆನ್ಸ್ ಸೇರಿದಂತೆ ಕಲ್ಲು ಕಂಬಗಳನ್ನು ಕಿತ್ತೊಗೆದು ನಾಶಗೊಳಿಸಿದೆ.
ರೈತನ ಅಳಲು: ಸಾಲ ಸೋಲಾ ಮಾಡಿ ಬೆಳೆದಿದ್ದ ಬಾಳೆಬೆಳೆ ಜತೆಗೆ ಕಲ್ಲು ಕಂಬ ಗಳನ್ನು ಹಾಕಿಸಿದ್ದೆ, ಇದೀಗ ಕಾಡಾನೆ ದಾಳಿ ಮಾಡಿ ಎಲ್ಲವನ್ನೂ ಮುರಿದು ಹಾಕಿದೆ ಇದರಿಂದ ನನಗೆ ಅತೀವ ನಷ್ಟವಾಗಿದೆ, ಬೆಳೆದ ಬೆಳೆಯು ಸಿಗಲಾರದೆ, ಸಾಲ ವನ್ನು ತೀರಿಸಲಾಗದೆ, ಸಾಲದ ಸುಳಿಯಲ್ಲಿ ಸಿಲುಕಿದಂತಾಗುತ್ತಿದೆ ಎಂದು ರೈತ ರಾಜೇಂದ್ರ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಆನೆ ಸೆರೆ ಹಿಡಿಯಲು ಒತ್ತಾಯ: ಪ್ರತಿ ದಿನ ಆನೆ ಒಂದಲ್ಲ ಒಂದು ಜಮೀನಿಗೆ ಲಗ್ಗೆ ಇಟ್ಟು ದಾಳಿ ಮಾಡುತ್ತಿದ್ದು ಮನುಷ್ಯರಿಗೆ ತೊಂದರೆಯಾದರೆ ಹೊಣೆ ಯಾರು? ಅದನ್ನು ಬೇಗ ಸೆರೆ ಹಿಡಿದು ಬೇರಡೆಗೆ ಸ್ಥಳಾಂತರಿಸುವಂತೆ ಒತ್ತಾಹಿಸಿದ್ದಾ್ರೆ.
