ಹನೂರು: ದನ ಮೇಯಿಸಲು ಹೋಗಿದ್ದ ವ್ಯಕ್ತಿಗಳಿಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಲೆಮಾದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ದಿನಳ್ಳಿ ಗ್ರಾಮದ ಸಮೀಪ ಜರುಗಿದೆ.
ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗಬಾಳು ಗ್ರಾಮದ ಬಸಪ್ಪನವರ ಮಕ್ಕಳಾದ ಸಿದ್ದಮರಿ, ಗಿರಿಯಪ್ಪ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.
ಘಟನೆ ವಿವರ: ಯರಗಬಾಳು ಗ್ರಾಮದ ಸಿದ್ದಮರಿ ಗಿರಿಯಪ್ಪ ರವರು ತಮಿಳುನಾಡಿನಲ್ಲಿ ನಡೆಯುವ ಆಡಿ ಜಾತ್ರೆಗೆ ತಮ್ಮ ದನಗಳನ್ನು ಮಾರಾಟ ಮಾಡಲು ತೆರಳಿದ್ದರು. ತದನಂತರ ಮಾರಾಟವಾದ ದನಗಳನ್ನು ಅರಣ್ಯದಲ್ಲಿ ಮೇಯಿಸಲು ತೆರಳಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ನಂತರ ಗ್ರಾಮಸ್ಥರು ನೋಡಿ ರಾಮಪುರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರು ಪ್ರಾಣ ಪಾಯದಿಂದ ಪಾರಾಗಿದ್ದಾರೆ.