Friday, April 18, 2025
Google search engine

Homeರಾಜ್ಯಮಾನವ-ಆನೆ ಸಂಘರ್ಷ ತಡೆಗೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ : ಸಿದ್ದರಾಮಯ್ಯ

ಮಾನವ-ಆನೆ ಸಂಘರ್ಷ ತಡೆಗೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ : ಸಿದ್ದರಾಮಯ್ಯ

ಬೆಂಗಳೂರು: ಮಾನವ-ಆನೆ ಸಂಘರ್ಷ ತಡೆಗೆ ನಮ್ಮ ಸರ್ಕಾರ ಎಲ್ಲಾ ಕ್ರಮಗೊಂಡಿದೆ. ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ, ವಿಶೇಷ ಟಾಸ್ಕ್ ಫೋರ್ಸ್‌ ಸೇರಿದಂತೆ ಹತ್ತು ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಶ್ವ ಆನೆ ದಿನದ ಅಂಗವಾಗಿ ಬೆಂಗಳೂರಿನ ಜಿಕೆವಿಕೆಯಲ್ಲಿ ʻಮಾನವ-ಆನೆ ಸಂಘರ್ಷ ನಿರ್ವಹಣೆʼ ವಿಷಯ ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಆನೆಗಳ ರಕ್ಷಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು.

ಮಾನವ-ಆನೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಅಂತಾರಾಷ್ಟ್ರೀಯ ಸಮ್ಮೇಳನ ಮಾನವ-ಆನೆ ಸಂಘರ್ಷಗಳನ್ನ ಕಡಿಮೆ ಮಾಡುವಲ್ಲಿ ಕ್ರಮ ಕೈಗೊಳ್ಳಲು ಉತ್ತಮವಾಗಿದೆ. ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿವೆ. ಅತಿ ಹೆಚ್ಚು ಹುಲಿ ಹೊಂದಿರುವ 2ನೇ ರಾಜ್ಯವಾಗಿದೆ. ಅಲ್ಲದೇ ಅತಿ ಹೆಚ್ಚು ಅರಣ್ಯ ಭೂಮಿ ಹೊಂದಿರುವ ರಾಜ್ಯವೂ ಆಗಿದೆ ಎಂದು ಶ್ಲಾಘಿಸಿದರು.

10 ವರ್ಷಗಳಲ್ಲಿ 2,500 ಮಾನವ-ಆನೆ ಸಂಘರ್ಷ

ಕರ್ನಾಟಕದಲ್ಲಿ ಮೈಸೂರು ಮತ್ತು ದಾಂಡೇಲಿ ಮೀಸಲು ಅರಣ್ಯ ಪ್ರದೇಶಗಳಿವೆ. ಕಳೆದ 10 ವರ್ಷಗಳಲ್ಲಿ 2,500 ಮಾನವ-ಆನೆ ಸಂಘರ್ಷ ಪ್ರಕರಣಗಳು ಆಗಿವೆ. ಮಾನವ ಪ್ರಾಣಿ ಸಂಘರ್ಷಗಳ ತಡೆಗೆ ಕರ್ನಾಟಕ ಸರ್ಕಾರ ವಿಶೇಷ ಅನುದಾನ ನೀಡಿದೆ. ಬಜೆಟ್‌ನಲ್ಲಿ ಇದಕ್ಕಾಗಿಯೇ ಹಣ ಮೀಸಲಿಟ್ಟಿದೆ ಅಂತ ವಿವರಿಸಿದರು.

ಸೋಲಾರ್ ಫೆನ್ಸಿಂಗ್ ವ್ಯವಸ್ಥೆ

ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ, ಸೋಲಾರ್ ಫೆನ್ಸಿಂಗ್ ಸೇರಿ ಅನೇಕ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ರೈಲ್ವೆ ಫೆನ್ಸಿಂಗ್ ಅಳವಡಿಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿದೆ. ಕರ್ನಾಟಕದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಮಾನವ-ಆನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಕರ್ನಾಟಕ 0% ಮಾನವ-ಪ್ರಾಣಿ ಸಂಘರ್ಷ ತಡೆಗೆ ವಿಶೇಷ ಕಾರ್ಯಕ್ರಮ ಜಾರಿಗೆ ಮಾಡಲಾಗಿದೆ. ಮಾನವ-ಆನೆ ಸಂಘರ್ಷ ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.

ಇಂದಿನ ಸಮ್ಮೇಳನದ ಮೂಲಕ ಉತ್ತಮ ಸಲಹೆಗಳು ಮಾನವ-ಆನೆ ಸಂಘರ್ಷ ತಡೆಗೆ ಬರಲಿ. ನಮ್ಮ ಸರ್ಕಾರದ ಉದ್ದೇಶ 0% ಮಾನವ-ಆನೆ ಸಂಘರ್ಷ ತಡೆಯೋದು ಅಂತ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯದ ಅರಣ್ಯ ಸಚಿವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular