ಮಂಡ್ಯ: ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಗವಿಮಠದಲ್ಲಿರುವ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಿಎಂ ಬಿಎಸ್ ವೈ ಭೇಟಿ ನೀಡಿ ಮನೆದೇವರ ದರ್ಶನ ಪಡೆದರು.
ಗವಿಮಠದ ಪೀಠಾಧ್ಯಕ್ಷ ಚನ್ನವೀರ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗೆ ಶಾಸಕ.ಹೆಚ್.ಟಿ ಮಂಜು ಸಾಥ್ ನೀಡಿದರು.
ಮನೆದೇವರ ದೇವಾಲಯದ ಮುಂದೆ ಹರಿಯುವ ಹಳ್ಳದ ಅವ್ಯವಸ್ಥೆ ನೋಡಿ ಬೇಸರಗೊಂಡ ಬಿಎಸ್ವೈ.
ಕೂಡಲೇ ಸ್ವಚ್ಛಗೊಳಿಸುವಂತೆ ಸ್ಥಳೀಯ ಅಧಿಕಾರಿಗೆ ತಿಳಿಸುವಂತೆ ಸೂಚಿಸಿದರು.