ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಸಿಎಂ, ಡಿಸಿಎಂ ನಡುವೆ ಸ್ಟಂಟ್ ನಡೆಯುತ್ತಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗೀತಗೊಂಡಿದೆ. ರೈತರ ಹೋರಾಟಕ್ಕೆ ಸ್ಪಂದನೆ ನೀಡುತ್ತಿಲ್ಲ. ಈ ರೀತಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಆಡಳಿತ ವ್ಯವಸ್ಥೆಯಲ್ಲಿ ಹಿಡಿತ ಕಳೆದೊಂದುಕೊಂಡಿದ್ದಾರೆ. ಬೆಳಗಾವಿಯಲ್ಲಿ ಅನುನೋದನೆಗೊಂಡ ಹಣ ಬಿಡುಗಡೆಗೆ ಸರಕಾರ ತಡೆ ಹಿಡಿದಿದೆ ಎಂದು ಆಪಾದಿಸಿದರು. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೂ ರಾಜ್ಯ ಕಾಂಗ್ರೆಸ್ ನಾಯಕತ್ವ ಗೊಂದಲ ನಿವಾರಣೆ ಮಾಡುವಲ್ಲಿ ಅಸಹಾಯಕರಾಗಿದ್ದಾರೆ. ಮೂರು ದಿನದಲ್ಲಿ ರಾಜ್ಯ ಸರಕಾರದ ಗೊಂದಲ ಬಗೆ ಹರೆಯದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಕಿತ್ತೂರು ಧಾರವಾಡದ ರೈಲ್ವೆ ಕಾಮಗಾರಿಗೆ ಕೇಂದ್ರ ಸರಕಾರ 927 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆರು ವರ್ಷ ಕಳೆದರೂ ಭೂಸ್ವಧೀನ ಪಡೆಸಿಕೊಂಡ 406.16 ಎಕರೆ ಜಮೀನಿಗೆ 149.28 ಕೋಟಿ ರೂ. ಭೂ ಪರಿಹಾರ ಕೊಡಲು ಧಾರವಾಡ ಕೆಐಡಿಬಿ ರಾಜ್ಯ ಸರಕಾರಕ್ಕೆ ಪ್ತಸ್ತಾವನೆ ಸಲ್ಲಿಸಿದರೂ ಬಿಡುಗಡೆ ಮಾಡದೆ ಇರುವುದು ದುರ್ದೈವದ ಸಂಗತಿ ಎಂದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲದ ಯೋಜನೆಗೆ ಬೆಳಗಾವಿ ನಗರ ಆಯ್ಕೆಯಾಗಿತ್ತು. ಆದರೆ ಘನತ್ಯಾಜ್ಯ ವಿಲೇವಾರಿ ಕುರಿತ ಯೋಜನೆಯಲ್ಲಿ 135 ಕೋಟಿ ರೂ. ಅನುದಾನ ಮಂಜುರಾಗಿದೆ. ಕಾರಣಾಂತರಗಳಿಂದ ಈ ಯೋಜನೆ ಅನುಷ್ಠಾನಗೊಳ್ಳಲು ವಿಫಲವಾಗಿದೆ ಎಂದರು.
ಅಮೃತ ಯೋಜನೆಯಲ್ಲಿ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ 70 ಲಕ್ಷ ಲೀಟರ್ ನಿರ್ಮಾಣಕ್ಕೆ 1.12 ಎಕರೆ ಪೈಕಿ 19.09 ಎಕರೆ ಹೆಚ್ಚುವರಿ ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ಕೊಡುವಲ್ಲಿ ವಿಳಂಬವಾಗಿರುವುದರಿಂದ ಆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ನಗರ ಘಟಕ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ್, ಬಿಜೆಪಿ ಮುಖಂಡ ಮುರುಗೇಂದ್ರಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



