Wednesday, April 9, 2025
Google search engine

Homeರಾಜ್ಯಸುದ್ದಿಜಾಲಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರೊ.ಎ.ಎಸ್.ಕಿರಣಕುಮಾರ್ ಅವರಿಗೆ ಡಾ.ಆರ್.ಎಲ್.ಕಪೂರ್ ಪ್ರಶಸ್ತಿ

ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರೊ.ಎ.ಎಸ್.ಕಿರಣಕುಮಾರ್ ಅವರಿಗೆ ಡಾ.ಆರ್.ಎಲ್.ಕಪೂರ್ ಪ್ರಶಸ್ತಿ

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿಂದು ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ. ಪ್ರೊ. ಎ.ಎಸ್‌ ಕಿರಣ್ ಕುಮಾರ್ ಅವರಿಗೆ ಡಾ.ಆರ್.ಎಲ್.ಕಪೂರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ,ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಶಾಖೆ 33ನೇ ವಾರ್ಷಿಕ ಸಮ್ಮೇಳನದಲ್ಲಿ ಈ ಡಾ.ಆರ್.ಎಲ್.ಕಪೂರ್ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.

ಬಾಗಲಕೋಟೆ ನಗರದ ಶತಾಬ್ದಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು ಆಗಿರುವ ಮಾಜಿ ಶಾಸಕ ಡಾಕ್ಟರ್ ವೀರಣ್ಣ ಚರಂತಿಮಠ ಹಾಗೂ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ನಿಮಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರೊ.ಎ.ಎಸ್.ಕಿರಣಕುಮಾರ್ ಅವರು ಇಂದು ಭಾರತ ಖಗೋಳಶಾಸ್ತ್ರದಲ್ಲಿ ಅನೇಕ‌ಸಾಧನೆಗಳನ್ನ ಮಾಡಿದೆ,ಇಸ್ರೋದ ಚಂದ್ರಯಾನ 3.ಉಡಾವಣೆಯಿಂದ ರಷ್ಯಾ,ಅಮೇರಿಕಾ ಸೇರಿದಂತೆ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.ಮನುಷ್ಯನಿಗೆ ಜ್ಞಾನ ಬಹಳ ಅವಶ್ಯಕವಾದದ್ದು,ಮನುಷ್ಯ ಸಾಧಿಸುವ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಹುದು ಹಾಗಾಗಿ ಸಾಧನೆಗೆ ಪರಿಶ್ರಮ ಅಗತ್ಯ ಎಂದ್ರು.ಇನ್ನೂ ಇಂತಹ‌ ಸಮ್ಮೇಳನಗಳನ್ನ ಆಯೋಜಿಸುವುದರ ಮೂಲಕ ಒಬ್ಬರ ವಿಚಾರಗಳನ್ನ ಮತ್ತೊಬ್ಬರು ಹಂಚಿಕೊಳ್ೞಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಪ್ರಮುಖರಾದ ಮಹೇಶ್ ಅಥಣಿ, ಅಶೋಕ ಸಜ್ಜನ ಬೇವೂರ್ ಸೇರದಂತೆ ಬಾಗಲಕೋಟೆ ಜಿಲ್ಲೆಯ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮನೋವೈದ್ಯರು,ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು. ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular