ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರದಲ್ಲಿ ಪಟ್ಟಣದದ ಸಮೀಪ ರೈಲ್ವೆ ರಕ್ಷಣಾ ದಳದ (ಆರ್.ಪಿ.ಎಫ್ )ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಮನವಿ ಸಲ್ಲಿಸಿದರು.
ಕೆ.ಆರ್.ನಗರ ಪಟ್ಟಣದ ಸಮೀಪ ಇರುವ ಹಳೆ ಎಡತೊರೆಯ ಅರ್ಕೇಶ್ವರ ದೇವಸ್ಥಾನದ ಬಳಿ ಸುಮಾರು 22 ಎಕರೆ ಜಾಗದಲ್ಲಿ ರೈಲ್ವೆ ಇಲಾಖೆಯ ವತಿಯಿಂದ ರೈಲ್ವೆ ರಕ್ಷಣಾ ದಳದ (ಆರ್.ಪಿ.ಎಫ್ )ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನ್ ವೈಷ್ಣವ್ ರವರನ್ನು ಭೇಟಿಮಾಡಿ ಕ್ರಮಕೈಗೊಳ್ಳುವಂತೆ ಕೋರಿದರು.
ಈಗಾಗಲೇ ಇಲ್ಲಿ ಈ ಕೇಂದ್ರವನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಮತ್ತೊಮ್ಮೆ ಕೇಂದ್ರ ಸಚಿವರನ್ನು ದೆಹಲಿಯಲ್ಲಿ ಬೇಟಿ ಮಾಡಿ ಸಾ.ರಾ.ಮಹೇಶ್ ರವರು ಮತ್ತೊಮ್ಮೆ ಮನವಿ ಮಾಡಿದರಲ್ಲದೆ ತ್ವರಿತವಾಗಿ ಆರಂಭಕ್ಕೆ ಮುಂದಾಗ ಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಸಂಬಂಧ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ರೈಲ್ವೆ ರಕ್ಷಣಾ ದಳದ (ಆರ್.ಪಿ.ಎಫ್ )ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಬೇಕಾದ ಅನುಧಾನ ಮತ್ತು ನೀಲಿನಕ್ಷೆ ತಯಾರು ಮಾಡಲು ತಿಳಿಸುವುದಾಗಿ ಭರವಸೆ ನೀಡಿದರು.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ರವರ ನೇತೃತ್ವದಲ್ಲಿ ರೈಲ್ವೆ ಸಚಿವರನ್ನು ಸಾ.ರಾ.ಮಹೇಶ್ ಬೇಟಿ ಮಾಡಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡಪ್ಪಕಾಂಶಪ್ಪಪೂರ್ ಇದ್ದರು.