Tuesday, April 22, 2025
Google search engine

Homeರಾಜ್ಯಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ

ಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ

ತುಮಕೂರು: ಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ(85) ಇಂದು(ಮಾ.23) ಬೆಂಗಳೂರಿನ  ಕೊಲಂಬಿಯಾ ಏಷ್ಯಾ  ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಇನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ನಿವಾಸಿ‌ಯಾಗಿದ್ದ ಮೃತರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದವರು. ಜೊತೆಗೆ ಶಿರಾ ಕ್ಷೇತ್ರದ ಮಾಜಿ ಶಾಸಕರು ಕೂಡ ಆಗಿದ್ದವರು. ನಾಳೆ(ಮಾ.24) ಬೆಳಿಗ್ಗೆ 10 ಗಂಟೆಗೆ ಸ್ವಗೃಹ ಚಿರತಹಳ್ಳಿ ಗ್ರಾಮದ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

1985 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಮೂಲಕ ರಾಜಕೀಯ ಪ್ರವೇಶಿಸಿದ್ದ ಇವರು, ಮೊದಲ ಪ್ರಯತ್ನದಲ್ಲೇ ಶಿರಾ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆಗೆ ಎಂಟ್ರಿಕೊಟ್ಟಿದ್ದರು. ನಂತರ ರಾಷ್ಟ್ರ ರಾಜಕಾರಣದ ಕಡೆ ಮುಖಮಾಡಿದ ಮೂಡಲಗಿರಿಯಪ್ಪ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬರೊಬ್ಬರಿ ಮೂರು ಬಾರಿ, ಅಂದರೆ 1989, 1991 ಮತ್ತು 1998 ರಲ್ಲಿ ವಿಜಯಶಾಲಿ ಆಗಿದ್ದರು.

RELATED ARTICLES
- Advertisment -
Google search engine

Most Popular