Monday, April 21, 2025
Google search engine

Homeರಾಜಕೀಯನಡೆದಂತೆ ನುಡಿಯದ ಬಿಜೆಪಿಗೆ ವಚನ ಪಾಲಕ ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲ :ಮಾಜಿ ಸಂಸದ...

ನಡೆದಂತೆ ನುಡಿಯದ ಬಿಜೆಪಿಗೆ ವಚನ ಪಾಲಕ ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲ :ಮಾಜಿ ಸಂಸದ ಉಗ್ರಪ್ಪ

ದಾವಣಗೆರೆ: ಈ ಬಾರಿ ಲೋಕಸಭಾ ಚುನಾವಣೆಯು ವಚನ ಭ್ರಷ್ಟರು ಹಾಗೂ ವಚನ ಪಾಲಕರ ನಡುವೆ ನಡೆಯುವ ಚುನಾವಣೆಯಾಗಿದೆ. ಬಿಜೆಪಿಯವರೇ ಈ ವಚನ ಭ್ರಷ್ಟರು, ಅವರಿಗೆ ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ಮಠದಲ್ಲಿ ಮಾತನಾಡಿದ ಅವರು, ಶ್ರೀರಾಮ ವಚನ ಪಾಲನೆಗೆ ಹೆಸರಾದವರು. ಬಿಜೆಪಿಯವರು ಹೇಳಿದ ಯಾವುದೇ ಆಶ್ವಾಸನೆ ಈಡೇರಿಸಲು ಆಗಿಲ್ಲ. ಆದರೆ ನಾವು ಐದು ಗ್ಯಾರೆಂಟಿಗಳನ್ನು ಪೂರೈಸುವ ಕೆಲಸವನ್ನು ಮಾಡಿದ್ದೇವೆ. ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಹೋರಾಟ ಮಾಡುತ್ತಿದ್ದರೆ ಬಿಜೆಪಿ ಸಂವಿಧಾನವನ್ನು ತೆಗೆದುಹಾಕುವ ಮಾತು ಹೇಳುತ್ತಿದೆ. ಸಂವಿಧಾನವನ್ನು ತೆಗೆದುಹಾಕಲು ಹೊರಟ ಮೋದಿ ಆಂಡ್ ಟೀಮ್ ಅನ್ನು ಜನ ತೆಗೆದುಹಾಕುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಅನ್ನು ಜನರು ಗೆಲ್ಲಿಸುತ್ತಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular