Saturday, April 26, 2025
Google search engine

Homeಅಪರಾಧಮೂಡಾ ಮಾಜಿ ಅಧ್ಯಕ್ಷ ಮುನವ್ವರ್ ಖಾನ್ ನಿಧನ

ಮೂಡಾ ಮಾಜಿ ಅಧ್ಯಕ್ಷ ಮುನವ್ವರ್ ಖಾನ್ ನಿಧನ

ಮಂಡ್ಯ : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಮುನವ್ವರ್ ಖಾನ್ ತೀವ್ರ ಹೃದಯಾಘಾತದಿಂದ ಬುಧವಾರ ನಿಧನರಾದರು.
ಬುಧವಾರ ಸಂಜೆ ಗುತ್ತಲು ಬಡಾವಣೆಯ ತಮ್ಮ ನಿವಾಸದಲ್ಲಿ ಕುಸಿದುಬಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದರು.

ಮೃತ ಮುನವರ್ ಖಾನ್ ಅವರಿಗೆ ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆಯು ನಗರದ ಹೊಳಲು ರಸ್ತೆಯ ಮುಸ್ಲಿಂ ಖಬರಸ್ತಾನ್‌ನಲ್ಲಿ ಡಿ.೨೮ ರಂದು ಮಧ್ಯಾಹ್ನ ೪.೩೦ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular