ಮೈಸೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಟಿವಿ ಶ್ರೀನಿವಾಸ್ ರಾವ್ ರವರ ಪುತ್ರ ಟಿ.ಎಸ್. ರವಿಶಂಕರ್(64) ರವರು ಹೃದಯಘಾತದಿಂದ ನಿಧನರಾಗಿದ್ದಾರೆ.
ಸಾಮಾಜಿಕ ಸೇವೆಯ ಮೇರು ಮುಖಂಡ, ಕಾಂಗ್ರೆಸ್ ಪಕ್ಷದ ಮುನ್ನೆಲೆಯಲ್ಲಿದ್ದ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ನಗರಾಧ್ಯಕ್ಷರು , ಗ್ರಾಜುಯೇಟ್ಸ್ ಕೋ ಆಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕ ಸಹಕಾರಿ ಬಲಿಷ್ಠ ಅನುಭವಿ , ರಾಜಕೀಯ ಹಿನ್ನೆಲೆ ಹೊಂದಿದ್ದ ಟಿ. ಎಸ್. ರವಿಶಂಕರ್ ನಿಧನರಾಗಿದ್ದಾರೆ.
ಟಿ. ಎಸ್. ರವಿಶಂಕರ್ ಅವರು ಪತ್ನಿ ಕಮಲಮ್ಮ , ಮಕ್ಕಳಾದ ನಿಖಿಲ್, ರಾಹುಲ್, ಸಹೋದರರಾದ ವೆಂಕಟೇಶ್, ಅನಿಲ್, ಸಹೋದರಿಯರಾದ ವಿಜಯಲಕ್ಷ್ಮಿ ಹಾಗೂ ಡಾ. ಸುಜಾತಾ ರಾವ್ ಅವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ದಿನಾಂಕ 29.01.2025ರ ಬುಧವಾರದಂದು ಬೆಳಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲ್ಲಲಿರುವ ಸುಡುವ ರುದ್ರ ಭೂಮಿಯಲ್ಲಿ ಜರಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸುವೆ.
ಎಚ್.ಎ ವೆಂಕಟೇಶ್ ಸಂತಾಪ
ಟಿ. ಎಸ್. ರವಿಶಂಕರ್ ನಿಧನಕ್ಕೆ ಸಂತಾಪ ಸೂಚಿಸಿರುವ ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್, ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ. ಎಸ್. ರವಿಶಂಕರ್ ರವರ ನಿಧನ ದಿಗ್ಭ್ರಮೆಯಾಗಿದೆ. ರವಿಶಂಕರ್ ಅವರ ತಂದೆ ದಿವಂಗತ ಟಿ.ವಿ. ಶ್ರೀನಿವಾಸ್ ರಾವ್ ರವರು ಮೈಸೂರಿನ ಖ್ಯಾತ ವಕೀಲರಲ್ಲಿ ಒಬ್ಬರಾಗಿ ನಗರ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಅತ್ಯುತ್ತಮ ಸಲ್ಲಿಸಿದ್ದರು.
ತಂದೆಯಂತೆ ರವಿಶಂಕರ್ ಅವರು ಕೂಡ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡವರಾಗಿದ್ದರು. ಮೈಸೂರು ನಗರದ ಪ್ರತಿಷ್ಠಿತ ಗ್ರಾಜುಯೆಟ್ ಬ್ಯಾಂಕಿನ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೈಸೂರು ನಗರದಲ್ಲಿ ಹತ್ತಾರು ಸಂಘ- ಸಂಸ್ಥೆಗಳಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ಸಮಾಜದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಇಡೀ ಕುಟುಂಬವೇ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿ ಪಕ್ಷದ ಬೆಳವಣಿಗೆಗೆ ಕಾರಣರಾಗಿದ್ದಾರೆ. ರವಿಶಂಕರ್ ನಿಧನದಿಂದ ಕಾಂಗ್ರೆಸ್ ಪಕ್ಷವು ಒಬ್ಬ ನಿಷ್ಠಾವಂತ ಪಕ್ಷದ ಕಟ್ಟಾಳುವನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.