ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ದಂಪತಿ ಸಮೇತ ಇಂದು ಸೋಮವಾರ ಭೇಟಿ ನೀಡಿದ್ದು, ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ ನೆರವೇರಿಸಿದರು. ಪತ್ನಿ ಚೆನ್ನಮ್ಮ ಜೊತೆಯಾಗಿ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಎಚ್.ಡಿ.ದೇವೇಗೌಡ ದಂಪತಿ ಬೆಳಿಗ್ಗೆ ಆಶ್ಲೇಷ ಪೂಜೆ ನೆರವೇರಿಸಿದರು.
ಜೆಡಿಎಸ್ ಮುಖಂಡ ಎಂ.ಬಿ. ಸದಾಶಿವ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಉಪಸ್ಥಿತಿರಿದ್ದರು. ಆಶ್ಲೇಷ ಪೂಜೆಯ ಬಳಿಕ ೧೧ ಗಂಟೆಯವರೆಗೆ ಎಚ್.ಡಿ. ದೇವಗೌಡರು ವಿಶ್ರಾಂತಿ ಪಡೆದರು. ಅದಾದಮೇಲೆ ತುಲಾಭಾರ ಸೇವೆ ನೆರವೇರಿಸಿದರು. ಅಕ್ಕಿ, ಬೆಲ್ಲ, ಕಡ್ಲೆಬೇಳೆ ಧಾನ್ಯಗಳಲ್ಲಿ ತುಲಾಭಾರ ಸೇವೆ ನೆರವೇರಿತು. ಎಚ್.ಡಿ. ದೇವೇಗೌಡ ದಂಪತಿ ೧೨ ಗಂಟೆಗೆ ಮಹಾಪೂಜೆಯಲ್ಲಿ ಭಾಗಿಯಾದರು.