ಗುಂಡ್ಲುಪೇಟೆ: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ವೇಳೆ ಪೋಲಿಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ತಾಲೂಕಿನ ಕೋಡಹಳ್ಳಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ನಡೆದಿದೆ.
ಕೋಡಹಳ್ಳಿ ಗ್ರಾಮದ ಮಹದೇವಶೆಟ್ಟಿ, ಗೋವಿಂದಶೆಟ್ಟಿ, ಸಿದ್ದರಾಜು, ಸ್ವಾಮಿ ಬಂಧಿತರು. ಇವರು ಅಕ್ರಮವಾಗಿ ಜೂಜಾಟವಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಕಿರಣ್ ನೇತೃತ್ವದ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸುವ ಜೊತೆಗೆ ಪಣಕ್ಕಿಟ್ಟಿದ್ದ 2080 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಕುರಿತು ಗುಂಡ್ಲುಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಎಎಸ್‍ಐ ಮಲ್ಲಿಕಾರ್ಜುನ, ಮುಖ್ಯಪೇದೆ ರಂಗಸ್ವಾಮಿ, ಪೇದೆ ಲೋಕೇಶ್, ಸುರೇಶ್, ಚಾಲಕ ಸಿದ್ದರಾಜೇಗೌಡ ಭಾಗವಹಿಸಿದ್ದರು.